Saturday, October 19, 2024
Google search engine
Homeಮುಖಪುಟಮೇ 4 ರಿಂದ ಜುಲೈ 17ರವರೆಗೆ ಪೆಟ್ರೋಲ್ 11ರೂ, ಡೀಸೆಲ್ 9 ರೂ ಹೆಚ್ಚಳ

ಮೇ 4 ರಿಂದ ಜುಲೈ 17ರವರೆಗೆ ಪೆಟ್ರೋಲ್ 11ರೂ, ಡೀಸೆಲ್ 9 ರೂ ಹೆಚ್ಚಳ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ನಾಲ್ಕನೇ ದಿನವೂ ಹೆಚ್ಚಳವಾಗಿದೆ. ಇಂದು ಪೆಟ್ರೋಡೀಸೆಲ್ ಬೆಲೆ 35 ಪೈಸೆಯಷ್ಟು ಏರಿಕೆಯಾಗಿದೆ. ಈ ವರ್ಷದ ಮೇ 4 ರಿಂದ ಜುಲೈ 17ರ ವರೆಗೆ ಪೆಟ್ರೋಲ್ 11.44 ರೂ ಮತ್ತು ಡೀಸೆಲ್ 9.14 ರೂಪಾಯಿ ಹೆಚ್ಚಳವಾಗಿದೆ.

ಕೇವಲ ಒಂದೂವರೆ ತಿಂಗಳಲ್ಲೇ ಪೆಟ್ರೋಡೀಸೆಲ್ ಬೆಲೆ ಸರಾಸರಿ 10 ರೂಪಾಯಿ ಹೆಚ್ಚಳ ಕಂಡಿದೆ. ಇದುವರೆಗೆ ಪೆಟ್ರೋಡೀಸೆಲ್ ಬೆಲೆ 19 ಬಾರಿ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ 107.24 ರೂ ಇದ್ದರೆ, ಡೀಸೆಲ್ 95.97ರೂ ಇದೆ. ವಾಣಿಜ್ಯನಗರಿ ಮುಂಬೈನಲ್ಲಿ ಪೆಟ್ರೋಡೀಸೆಲ್ ಬೆಲೆ ದಾಖಲೆ ಬರೆಯುತ್ತಲೇ ಇದೆ. ಪೆಟ್ರೋಲ್ 113.12 ರೂಗೆ ಏರಿಕೆಯಾಗಿದ್ದರೆ, ಡೀಸೆಲ್ 104 ರೂ ಇದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110.90 ರೂ ಆಗಿದೆ. ಡೀಸೆಲ್ 101.86 ರೂ ಇದೆ. ಸೆಪ್ಟೆಂಬರ್ 28ರ ನಂತರ ಪೆಟ್ರೋಲ್ ಬೆಲೆ 19 ಬಾರಿ ಹೆಚ್ಚಳವಾಗಿದ್ದರೆ, ಪ್ರತಿ ಲೀಟರ್ ಗೆ 5.7ರೂ ಏರಿಕೆಯಾಗಿದೆ.

ಸೆಪ್ಟೆಂಬರ್ 24 ರಿಂದ ಡೀಸೆಲ್ ಬೆಲೆ 22 ಬಾರಿ ಹೆಚ್ಚಳವಾಗಿ ಪ್ರತಿ ಲೀಟರ್ ಗೆ 7 ರೂ ಏರಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular