Friday, November 22, 2024
Google search engine
Homeಮುಖಪುಟಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇಲ್ಲ - ವಿ.ಎಸ್.ಉಗ್ರಪ್ಪ

ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇಲ್ಲ – ವಿ.ಎಸ್.ಉಗ್ರಪ್ಪ

ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಆದರೆ ಕೆಲವು ಮಾಧ್ಯಗಳು ಬಿಂಬಿಸುವ ರೀತಿಯಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ತುಮಕೂರು ಜಿಲ್ಲೆ ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಲು ಜಮೀನನ್ನು ಖರೀದಿ ಮಾಡದೆ ಲೀಸ್ ಮೂಲಕ ತೆಗೆದುಕೊಂಡಿರುವುದು ಅವರ ಜನಪರ ಮತ್ತು ಅಭಿವೃದ್ಧಿ ಕೆಲಸಕ್ಕೆ ಸಾಕ್ಷಿಯಾಗಿದೆ. ಕೆಪಿಸಿಸಿ ಮಾಧ್ಯಮ ವಿಭಾಗದ ಸಲೀಂ ಅವರು ನಾನು ಪತ್ರಿಕಾಗೋಷ್ಟಿಗೆ ಆಗಮಿಸಿದಾಗ ನನ್ನ ಕಿವಿಯಲ್ಲಿ ಜನ ಹೀಗೆ ಮಾತನಾಡುತ್ತಿದ್ದಾರೆ. ನೀರಾವರಿ ಇಲಾಖೆ ಹಗರಣ ವಿಚಾರವಾಗಿ ಬಿಜೆಪಿ ಅವರು ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾನು ಅದನ್ನು ಅಲ್ಲಿಗೆ ನಿಲ್ಲಿಸಿ ಪತ್ರಿಕಾಗೋಷ್ಠಿ ನಡೆಸಿದೆ. ಅದನ್ನು ಮಾಧ್ಯಮಗಳು ಬೇರೆ ರೀತಿ ಬಿಂಬಿಸುತ್ತಿವೆ. ಡಿ.ಕೆ. ಶಿವಕುಮಾರ್ ಉತ್ತಮ ಆಡಳಿತಗಾರ. ಜನಪರ ಚಿಂತನೆಯ ನಾಯಕ. ಅವರು ಸಂಪಾದಿಸಿರುವ ಹಣ ರಾಜಕಾರಣದಿಂದ ಅಲ್ಲ. ಅವರು ತಮ್ಮ ವ್ಯವಹಾಗಳಿಂದ ಸಂಪಾದನೆ ಮಾಡಿದ್ದಾರೆ. ಅವರು ಎಂದಿಗೂ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನೀರಾವರಿ ಹಗಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಆಯನೂರು ಉಮೇಶ್ ಅವರು ನನ್ನ ಜಿಲ್ಲೆ. ಅವರು ನಮ್ಮ ನಾಯಕರ ಮೇಲೆ ಆರೋಪ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲು ಮುಂದಾಗಿದ್ದರು ಸಲೀಂ ಎಂದರು.

ನಮ್ಮ ಪಕ್ಷದ ಅಧ್ಯಕ್ಷರಾಗಲೀ, ನಾಯಕರಾಗಲಿ ಅಧಿಕಾರದಲ್ಲಿದ್ದಾಗ ಪರ್ಸೆಂಟೇಜ್ ಪಡೆಯುವ ಸಂಸ್ಕೃತಿ ಬೆಳೆಸಿಲ್ಲ. ಆ ಪಿಸುಗುತ್ತಿದ್ದ ಮಾತು ವೈಭವೀಕರಣ ಮಾಡಿ ಬಿಂಬಿಸುವ ಕೆಲಸ ಮಾಧ್ಯಮ ಮೌಲ್ಯಗಳಿಗೆ ಸಮಂಜಸವಲ್ಲ ಎಂದರು.

ಮೋದಿ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಮಿಷನ್ ರಾಮಯ್ಯ ಎಂದಾಗ 100 ಕೋಟಿ ಮಾನಹಾನಿ ಕೇಶ್ ಹಾಕಿದೆವು. ಅದಕ್ಕೆ ಮೋದಿ ಅವರು ಉತ್ತರ ನೀಡಲಿಲ್ಲ. ಭ್ರಷ್ಟಾಚಾರ ಗಂಗ್ರೋತ್ರಿ ಹರಿಸುತ್ತಿರುವುದು ಬಿಜೆಪಿ ನಾಯಕರು. ಇಡಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದಲ್ಲಿ ದಾಳಿ ನಡೆಸಿದ ನಂತರ ನಾವು ಮಾಧ್ಯಮಗಳಿಗೆ ಮಾಹಿತಿ ನೀಡಿ 750 ಕೋಟಿ ಲೆಕ್ಕದ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಇದು ಯಾರ ಆಡಳಿತದಲ್ಲಿ ನಡೆದಿದೆ? ಇದಕ್ಕೆ ಹೊಣೆ ಯಾರು? ಈ ಬಗ್ಗೆ ಮೋದಿ, ಬಿಜೆಪಿ ಮಾತನಾಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular