Friday, October 18, 2024
Google search engine
Homeಮುಖಪುಟಮಹಿಳೆ ಮೇಲೆ ಅತ್ಯಾಚಾರ-ಸಂತ್ರಸ್ಥೆ ಸಾವು

ಮಹಿಳೆ ಮೇಲೆ ಅತ್ಯಾಚಾರ-ಸಂತ್ರಸ್ಥೆ ಸಾವು

ಚಾಲಕನೊಬ್ಬ 32 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ತೀವ್ರ ಹಲ್ಲೆ ಮಾಡಿದ ಪರಿಣಾಮ ಸಂತ್ರಸ್ಥೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಕಿನಾಕದಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ 36 ಗಂಟೆಗಳ ಹೋರಾಟ ನಡೆಸಿದ ನಂತರ ಪ್ರಾಣಪಕ್ಷಿ ಹಾರಿಹೋಗಿದೆ.

ಶುಕ್ರವಾರ ಮುಂಜಾನೆ3.15ರ ಸಮಯದಲ್ಲಿ ಚಂಡಿವ್ಲಿ ಸ್ಟುಡಿಯೋ ಸಮೀಪ ಈ ಘಟನೆ ಜರುಗಿದೆ. ಚಾಲಕನೊಬ್ಬ ಮಹಿಳೆಯ ಮೇಲೆ ರಸ್ತೆಯಲ್ಲೇ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ ಬಳಿಕ ಆರೋಪಿ ಪತ್ತೆಯಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯ ಖಾಸಗಿ ಭಾಗಕ್ಕೆ ಪೈಪನ್ನು ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಮಹಶ್ವರ್ ರೆಡ್ಡಿ, ಘಟನಾ ಸ್ಥಳಕ್ಕೆ ಸಾಕಿನಾಕ ಪೊಲೀಸರು 10 ನಿಮಿಷಕ್ಕೆ ತೆರಳಿದ್ದಾರೆ. ಆಗ ಮಹಿಳೆಯ ದೇಹದಿಂದ ರಕ್ತ ಸುರಿಯುತ್ತಿತ್ತು. ಕೂಡಲೇ ಸಂತ್ರಸ್ಥೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಪಿಯ ವಿರುದ್ಧ ಕೊಲೆ, ಅತ್ಯಾಚಾರ, ಅನೈಸರ್ಗಿಕ ಆರೋಪ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಎನ್.ಸಿಪಿ ಮುಖಂಡ ನವಾಜ್ ಮಲ್ಲಿಕ್ ಮಾತನಾಡಿ, ಅತ್ಯಾಚಾರ ಸಂತ್ರಸ್ಥೆ ಇನ್ನಿಲ್ಲ. ಆರೋಪಿಯನ್ನು ಬಂಧಿಸಲಾಗಿದೆ. ಕೂಡಲೇ ಸರ್ಕಾರ ಚಾರ್ಜ್ ಶೀಟ್ ಹಾಕಬೇಕು. ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular