Thursday, September 19, 2024
Google search engine
Homeಮುಖಪುಟ12 ಹೈಕೋರ್ಟ್ ಗಳಿಗೆ 68 ನ್ಯಾಯಾಧೀಶರ ಹೆಸರು ಶಿಫಾರಸು

12 ಹೈಕೋರ್ಟ್ ಗಳಿಗೆ 68 ನ್ಯಾಯಾಧೀಶರ ಹೆಸರು ಶಿಫಾರಸು

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ಸದಸ್ಯರ ಕೊಲಿಜಿಯಂ ಸಭೆ ಸೇರಿ 12 ಹೈಕೋರ್ಟ್ ಗಳಿಗೆ 68 ಮಂದಿ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಇದರಲ್ಲಿ ಅಲಹಾಬಾದ್, ರಾಜಸ್ಥಾನ ಮತ್ತು ಕಲ್ಕತ್ತಾ ಹೈಕೋರ್ಟ್ ಗಳು ಸೇರಿವೆ.

ಅಲಹಾಬಾದ್, ರಾಜಸ್ಥಾನ, ಕಲ್ಕತ್ತಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಮದ್ರಾಸ್, ಮಧ್ಯಪ್ರದೇಶ, ಕರ್ನಾಟಕ, ಪಂಜಾಬ್, ಹರ್ಯಾಣ, ಕೇರಳ, ಛತ್ತೀಸ್ ಘಡ ಮತ್ತು ಅಸ್ಸಾಂ ಹೈಕೋರ್ಟ್ ಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಆಗಸ್ಟ್ 25 ಮತ್ತು ಸೆಪ್ಟೆಂಬರ್ 1ರಂದು ಸಭೆ ಸೇರಿದ ಕೊಲಿಜಿಯಂ ಒಟ್ಟು 112 ಮಂದಿ ಅಭ್ಯರ್ಥಿಗಳ ಹೆಸರುಗಳನ್ನು ಪರಿಗಣಿಸಿತು. 82 ಮಂದಿ ಬಾರ್ ಕೌನ್ಸಿಲ್ ಗಳಿಂದ ಮತ್ತು 31 ಮಂದಿಯನ್ನು ನ್ಯಾಯಾಂಗ ಸೇವೆಯಿಂದ ಪರಿಗಣಿಸಿದೆ. 12 ಹೈಕೋರ್ಟ್ ಗಳಿಗೆ ನ್ಯಾಯಾಧೀಶರಾಗಿ ನೇಮಕ ಮಾಡಬಹುದು ಎಂದು ಕೊಲಿಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿದೆ.

68 ಮಂದಿಯನ್ನು ಶಿಫಾರಸು ಮಾಡಿರುವ ಕೊಲಿಜಿಯಂ 44 ಮಂದಿಯನ್ನು ಬಾರ್ ಕೌನ್ಸಿಲ್ ನಿಂದ ಮತ್ತು 24 ಮಂದಿಯನ್ನು ನ್ಯಾಯಾಂಗ ಸೇವೆಯಿಂದ ನ್ಯಾಯಾಧೀಶರಾಗಲು ಶಿಫಾರಸುಗೊಳಿಸಿದೆ.

ಪರಿಶಿಷ್ಟ ಪಂಗಡದ ನ್ಯಾಯಾಂಗ ಅಧಿಕಾರಿ ಮರ್ಲಿ ವಂಕಂಗ್ ಅವರನ್ನು ಗುವಾಹಟಿ ಹೈಕೋರ್ಟ್ ಗೆ ನ್ಯಾಯಾಧೀಶರನ್ನಾಗಿ ಶಿಫಾರಸು ಮಾಡಲಾಗಿದೆ. ಇವರು ಮಿಜೋರಾಂ ರಾಜ್ಯದಿಂದ ಹೈಕೋರ್ಟ್ ನ್ಯಾಯಾಧೀಶರಾಗುತ್ತಿರುವ ಮೊದಲ ಮಹಿಳೆಯಾಗಿದ್ದಾರೆ.

10 ಮಂದಿ ಮಹಿಳಾ ಹೆಸರುಗಳನ್ನು ಶಿಫಾರಸು ಮಾಡಿದ್ದು 16 ಮಂದಿ ಅಭ್ಯರ್ಥಿಗಳ ಹೆಸರುಗಳನ್ನು ಪರಿಗಣಿಸಲಾಗಿತ್ತು. ಕೊಲಿಜಿಯಂನಲ್ಲಿ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ಯು.ಯು.ಲಲಿತ್ ಮತ್ತು ಎ.ಎಂ. ಖಾನ್ ವಾಲಿಕರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular