Thursday, September 19, 2024
Google search engine
Homeಮುಖಪುಟಟೋಕಿಯೋ:ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್

ಟೋಕಿಯೋ:ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್

ಟೋಕಿಯೋದ ಪ್ಯಾರಾಲಂಪಿಕ್ಸ್ ಕ್ರಿಡಾಕೂಟದಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಲ್-3 ವಿಭಾಗದಲ್ಲಿ ಭಾರತದ ಪ್ರಮೋದ್ ಭಗತ್ ಗ್ರೇಟ್ ಬ್ರಿಟನ್ ಕೆವಿಯಲ್ ಜಿಥೆಲ್ ವಿರುದ್ಧ ಚಿನ್ನದ ಪದಕ ಗಳಿಸಿದ್ದಾರೆ.

ಭುವನೇಶ್ವರದ ಭಗತ್ 21-14, 21-17 ಪಾಯಿಂಟ್ ಪಡೆದು ಮೂಲಕ ಪ್ಯಾರಾಲಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಮೊದಲ ಚಿನ್ನದ ಪಡೆದರು.

ಮೊದಲ ಪಂದ್ಯದಲ್ಲಿ ಪೂರ್ಣಗೊಳಿಸಲು 21 ನಿಮಿಷ ತೆಗೆದುಕೊಂಡರೆ, ಎರಡನೇ ಪಂದ್ಯದಲ್ಲಿ 24 ನಿಮಿಷ ತೆಗೆದುಕೊಂಡು ಒಟ್ಟು 45 ನಿಮಿಷ ಆಟವಾಡಿದರು ಪ್ರಮೋದ್ ಭಗತ್.

ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ಉತ್ತಮ ಆಟ ನಡೆಯಿತು. ಭಾರತದ ಪ್ರಮೋದ್ ಭಗತ್ ಆರಂಭದಿಂದಲೂ ನಿಧಾನವಾಗಿ ತಾಳ್ಮೆಯಿಂದ ಆಟವಾಡಿದರು. ಬ್ರಿಟನ್ ನ ಬೆಥೆಲ್ ಅವರಿಂದ ಪಾಯಿಂಟ್ ಪಡೆಯಲು ಕೌಶಲ್ಯಪೂರವಾಗಿ ಆಡಿ ಗೆಲುವು ಸಾಧಿಸಿದರು.

ಬ್ರಿಟನ್ ಆಟಗಾರ ಡ್ರಾಪ್ ಶಾಟ್ ಗಳನ್ನು ಆಟವಾಡಲು ಪ್ರಯತ್ನಿಸಿದರು. ಆದರೆ ರಕ್ಷಣಾತ್ಮಕವಾಗಿ ಆಡಿದ ಪ್ರಮೋದ್ ಭಗತ್ ಅಂತಿಮ ಪಂದ್ಯದಲ್ಲಿ 21-14 ಪಾಯಿಂಟ್ ಗಳಿಸಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular