ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದೆ. ಡಿಸಿ ಅವರ ಇ-ಮೇಲ್ ಮಾಹಿತಿ ಬಂದಿದ್ದು ಈ ಹಿನ್ನೆಲೆಯಲ್ಲಿ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಡಿಸಿ ಕಚೇರಿಗೆ ಬಂದು ಪರಿಶೀಲನೆ ನಡೆಸಿದರು.
ಡಿ.16ರಂದು ಮಂಗಳವಾರ ಬೆಳಗ್ಗೆ 7ಗಂಟೆ ಜಿಲ್ಲಾಧಿಕಾರಿಗಳ ಇ-ಮೇಲ್ ಗೆ ಡಿಸಿ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಇದರಿಂದ ಡಿಸಿ ಕಚೇರಿಯಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಎಲ್ಲಾ ಕಡೆ ಪರಿಶೀಲಿಸಲಾಗಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಗೊತ್ತಾದ ಮೇಲೆ ಆತಂಕದ ವಾತಾವರಣ ತಿಳಿಯಾಯಿತು.
ಬಳಿಕ ಮಾತನಾಡಿದ ಎಸ್ಪಿ ಅಶೋಕ್ ಮಾತನಾಡಿ, ಬಾಂಬ್ ಬೆದರಿಕೆ ಇ-ಮೇಲ್ ಗೆ ಬೆದರಿಕೆ ಬಂದಿದೆ. ವಿಷಯ ತಿಳಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದೆ. ಶ್ವಾನ ದಳವನ್ನು ಕರೆಸಿದೆವು ಡಿಸಿ ಕಚೇರಿಯ ಒಳಗೆ ಮತ್ತು ಸುತ್ತಮುತ್ತಲಿರುವ ಕಚೇರಿಗಳಲ್ಲಿ ಪರಿಶೀಲಿಸಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ಸ್ಪೋಟಕವಾಗಲಿ ಪತ್ತೆಯಾಗಿಲ್ಲ. ಚಕ್ ಮಾಡಿದ ಮೇಲೆ ಅಧಿಕಾರಿಗಳನ್ನು ಡಿಸಿ ಕಚೇರಿಗೆ ಬಿಟ್ಟಿದ್ದೇವೆ. ಬಾಗಿಲ ಬಳಿ ಮೆಟೆಲ್ ಡಿಟೆಕ್ಟರ್ ಅನ್ನು ಇಟ್ಟಿದ್ದೇವೆ. ಇದರ ಮೂಲಕ ಎಲ್ಲರನ್ನು ಪರಿಶೀಲಿಸಿ ಒಳಗೆ ಬಿಡುತ್ತಿದ್ದೇವೆ. ಹೈ ಅಲರ್ಟ್ ನಲ್ಲಿ ಇರುತ್ತೇವೆ. ಮೇಲ್ ಬಗ್ಗೆ ಎಫ್ಐಆರ್ ಮಾಡಿ ಕೂಲಂಕಷವಾಗಿ ತನಿಖೆ ಕೈಗೊಳ್ಳುತ್ತೇವೆ. ಮೇಲ್ ನಲ್ಲಿ ಏನೇನು ಇದೆ ಎಂಬುದನ್ನು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಡಿಸಿ ಅವರ ಅಫಿಷಿಯಲ್ ಮೇಲ್ ಗೆ ಬಾಂಬ್ ಬೆದರಿಕೆ ಬಂದಿದೆ. ಅದು ಹೆಡ್ಡರ್ ಕನ್ನಡದಲ್ಲಿದೆ. ಬಾಡಿ ಬಂದು ಇಂಗ್ಲೀಷ್ ನಲ್ಲಿ ಇದೆ. ಇದರ ಬಗ್ಗೆ ತನಿಖೆ ಮಾಢಲಾಗುವುದು. ಇನ್ನು ಎರಡು ಮೂರು ದಿನ ಹೈ ಅಲರ್ಟ್ ನಲ್ಲಿ ಇರುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದರು.
ಬಾಂಬ್ ಬೆದರಿಕೆ ಬಂದಿರುವ ಮೇಲ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.


