Tuesday, January 20, 2026
Google search engine
Homeಮುಖಪುಟಕನ್ನಡ ಬಳಸಿ ಉಳಿಸೋಣ-ಲೇಖಕಿ ಮರಿಯಂಬಿ

ಕನ್ನಡ ಬಳಸಿ ಉಳಿಸೋಣ-ಲೇಖಕಿ ಮರಿಯಂಬಿ

ಕನ್ನಡ ಭಾಷೆಯು ಸರಳ ಸುಂದರ. 2000 ವರ್ಷಗಳಷ್ಟು ಇತಿಹಾಸ ಹೊಂದಿರುವ ಭಾಷೆ. ದಿನನಿತ್ಯದ ಆಗುಹೋಗುಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ  ಸಾಧ್ಯವಾದಷ್ಟೂ ನಾವು ಕನ್ನಡವನ್ನು ಬಳಸಿ ಉಳಿಸಬೇಕಿದೆ ಎಂದು ಲೇಖಕಿ ಮರಿಯಂಬಿ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ,ಕೆಪಿಎಸ್ ಎಂಪ್ರೆಸ್ ಬಾಲಕಿಯರ ಹೈಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷಿಕರು  ಮುಂಬೈ, ಮದ್ರಾಸ್, ಕೊಡಗು ಹೈದರಾಬಾದ್ ಮೊದಲಾದ ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದಂತಹ ಸಂದರ್ಭದಲ್ಲಿ, ರಾ.ಹ ದೇಶಪಾಂಡೆ, ರೊದ್ದಂ ಶ್ರೀನಿವಾಸ್, ಆಲೂರು ವೆಂಕಟರಾಯರು ಮುಂತಾದವರು ಕನ್ನಡಕ್ಕಾಗಿ ಹೋರಾಟ ಮಾಡಿದರು.

 ಕನ್ನಡ ಎಂದರೆ ಬರೀ ಭಾಷೆ ಅಲ್ಲ, ನಮ್ಮ ಸಂಸ್ಕ್ರತಿ, ಪರಂಪರೆ, ಜೀವನ ವಿಧಾನ, ಆಸ್ಮಿತೆ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ ಕನ್ನಡವನ್ನು ಬೆಳೆಸೋಣ. ಎಲ್ಲಾದರೂ ಇರು, ಎಂತಾದರೂ ಇರು  ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ಮಾತಿನಂತೆ ಬದುಕೋಣ ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯು, ರಾಜ್ಯದಲ್ಲಿಯೇ ಮೊದಲು ಪ್ರಾರಂಭವಾದ ಜಿಲ್ಲಾ ಶಾಖೆ. ಲೇಖಕಿಯರ ಸಂಘದಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ ಎಂದು ತಿಳಿಸಿದರು.

ತುಮಕೂರು ನಗರದ ರಾಜನ್ , ಎಂಪ್ರೆಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ತಮ್ಮ ಸಹೋದರಿಯರಾದ ದಿ. ಸೋಮಾವತಿ ಮತ್ತು ಇಂದಿರಾ ಅವರ ನೆನಪಿನಲ್ಲಿ ಎಂಪ್ರೆಸ್ ಹೈಸ್ಕೂಲ್ ನಲ್ಲಿ, 2025 ನೇ ಸಾಲಿನ S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಪ್ರಾಯೋಜಿಸಿರುವ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿಯೂ, ಈ ಕಾರ್ಯಕ್ರಮವು ತಮ್ಮಲ್ಲಿ, ಮುಂದಿನ ಸಾರಿ ತಾನೂ ಬಹುಮಾನ ಪಡೆಯಬೇಕೆಂಬ ಛಲ ಮೂಡಿಸಿ ಚೆನ್ನಾಗಿ ಓದಲು ಉತ್ಸಾಹ ತುಂಬಲಿ ಎಂದು ತಿಳಿಸಿದರು.

ಎಂಪ್ರೆಸ್ ಶಾಲೆಯ ಉಪ ಪ್ರಾಂಶುಪಾಲ ಮಂಜುಳಾ, ರಾಜನ್ ಕನ್ನಡ ಪ್ರೇಮವನ್ನು ಶ್ಲಾಘಿಸಿ, ತಮ್ಮ ಶಾಲೆಯ ವಿದ್ಯಾರ್ಥಿಗಳ ಬಗೆಗಿನ ಅವರ ಕಾಳಜಿಯನ್ನು, ಸಹೋದರಿಯರ ಮೇಲಿನ ಪ್ರೀತಿಯನ್ನು ಕೊಂಡಾಡಿದರು.

2025 ನೇಸಾಲಿನಲ್ಲಿ, ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಿವನಾಗಮ್ಮ, ಉಮಾ .ಎಚ್.ಕೆ ಮತ್ತು ಅಜ್ಮತ್ ಉನ್ನೀಸಾ ರವರಿಗೆ, ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯಲ್ಲಮ್ಮ ಮತ್ತು ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯಲ್ಲಮ್ಮ ರವರಿಗೆ, ತಲಾ 1000ದಂತೆ ಒಟ್ಟು ರೂ 5000 ನಗದು ಬಹುಮಾನ ವಿತರಿಸಲಾಯ್ತು.

ಸಂಘದ ಉಪಾಧ್ಯಕ್ಷೆ ಸಿ.ಎ.ಇಂದಿರಾ, ಖಜಾಂಚಿ ಸಿ.ಎಲ್.ಸುನಂದಮ್ಮ ಮತ್ತು ನಿಕಟ ಪೂರ್ವ ಅಧ್ಯಕ್ಷ ಸಿ.ಎನ್ .ಸುಗುಣಾ ದೇವಿ, ಸದಸ್ಯರಾದ ಸುಮಾ ಪ್ರಸನ್ನ, ಅಕ್ಕಮ್ಮ ಮತ್ತು ಲಲಿತಾ ಮಲ್ಲಪ್ಪ ಇದ್ದರು. ರಾಣಿ ಚಂದ್ರಶೇಖರ್ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular