Monday, September 16, 2024
Google search engine
Homeಮುಖಪುಟಅತ್ಯಾಚಾರ ಪ್ರಕರಣ: ಐವರು ಆರೊಪಿಗಳ ಬಂಧನ

ಅತ್ಯಾಚಾರ ಪ್ರಕರಣ: ಐವರು ಆರೊಪಿಗಳ ಬಂಧನ

ದೇಶಾದ್ಯಂತ ಸುದ್ದಿಯಾಗಿ ಜನರ ಗಮನ ಸೆಳೆದಿದ್ದ ಮೈಸೂರು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ನಾಲ್ಕು ದಿನಗಳ ನಂತರ ಬಂಧಿಸಲಾಗಿದೆ. ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ಮೈಸೂರಿನ ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ಆಗಸ್ಟ್ 24ರಂದು ರಾತ್ರಿ ಎಂಬಿಎ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿ ಪರಾರಿಯಾಗಿದ್ದರು. ಚಾಮುಂಡಿ ಬೆಟ್ಟದಿಂದ ಮನೆಗೆ ವಾಪಸ್ಸಾಗುತ್ತಿದ್ದ ಯುವಕ-ಯುವತಿ ಮೇಲೆ ಕುಡಿತದ ಅಮಲಿನಲ್ಲಿದ್ದ ಆರು ಮಂದಿ ಹಲ್ಲೆ ನಡೆಸಿದ್ದರು. ನಂತರ ಯುವತಿಯ ಮೇಲೆ ಅತ್ಯಾಚಾರ ಮಾಡಿ ಹೋಗಿದ್ದರು.

ಇದು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಆಗಸ್ಟ್ 27ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಐಜಿಪಿ ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ತಮಿಳುನಾಡಿಗೆ ತೆರಳಿದ್ದ ತಂಡ ಇಂದು ತಿರುಪುರ್ ನಲ್ಲಿ ಅಪ್ರಾಪ್ತ ವಯಸ್ಕ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಐಜಿಪಿ ತಿಳಿಸಿದ್ದಾರೆ.

ಆರೋಪಿಗಳು ಲಲಿತಾದ್ರಿಪುರಂ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಸ್ಥಳದಲ್ಲಿ ತಾಳವಾಡಿಯಿಂದ ಚಾಮರಾಜ ನಗರಕ್ಕೆ ಪ್ರಯಾಣಿಸಿದ್ದ ಬಸ್ ಟಿಕೆಟ್ ಪತ್ತೆಯಾಗಿತ್ತು. ಇದರ ಜಾಡು ಹಿಡಿದ ಪೊಲೀಸರು ಚಾಲಕ, ಕಾರ್ಪೆಂಟರ್, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕನೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಲ್ಲಿ ಓರ್ವ ತಾನು ಪ್ರೀತಿಸುತ್ತಿದ್ದ ಹುಡುಗಿಯ ತಂದೆ ಮದುವೆಗೆ ಒಪ್ಪದಿದ್ದ ಕಾರಣಕ್ಕೆ ಪ್ರಿಯತಮೆಯ ತಂದೆಯನ್ನೇ ಹತ್ಯೆ ಮಾಡಿದ್ದ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular