Friday, September 20, 2024
Google search engine
Homeಮುಖಪುಟಕೇರಳದಲ್ಲಿ ಹೆಚ್ಚಿದ ಕೊರೊನ ಪ್ರಕರಣ

ಕೇರಳದಲ್ಲಿ ಹೆಚ್ಚಿದ ಕೊರೊನ ಪ್ರಕರಣ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 25,467 ಹೊಸ ಕೊವಿಡ್-19 ಪ್ರಕರಣಗಳು ಹಾಗೂ 345 ಸಾವುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು ಕೇಸ್ ಲೋಡ್ ನ ಶೇ.1ಕ್ಕಿಂತ ಕಡಿಮೆ ಇದ್ದು ಪ್ರಸ್ತುತ 3.19 ಲಕ್ಷದಷ್ಟಿವೆ ಎಂದು ವರದಿಗಳು ತಿಳಿಸಿವೆ.

ಚೇತರಿಕೆಯ ಪ್ರಮಾಣವು ಶೇಕಡ 97.68ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿದ್ದು 13,383, ಮಹಾರಾಷ್ಟ್ರದಲ್ಲಿ 3,643 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಡೆಲ್ಟಾ ಮತ್ತು ಕೊರೊನ ಸೋಂಕು ಪ್ರಕರಣಗಳ ಸಂಖ್ಯೆ 103ಕ್ಕೆ ಏರಿದೆ. ಇದರಲ್ಲಿ 27 ಹೊಸ ಪ್ರಕರಣಗಳು ಸೇರಿವೆ. ಆದರೆ ಡೆಲ್ಟಾ ರೂಪಾಂತರವು ಮುಂಬೈನಲ್ಲಿ 128 ಸ್ವ್ಯಾಬ್ ಮಾದರಿಗಳಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮತ್ತು ಬಿಎಂಸಿ ತಿಳಿಸಿದೆ.

ಈ 128 ಸ್ವ್ಯಾಬ್ ಮಾಧರಿಗಳು ಕೊರೊನ ಸೋಂಕಿನ ಡೆಲ್ಟಾ ರೂಪಾಂತರದೊಂದಿಗೆ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ 188 ಮಾದರಿಗಳಲ್ಲಿ 128 ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ.

ಮುಂಬೈನ ಧಾರವಿ ಕೊಳೆಗೇರಿ ಕಾಲೋನಿಯಲ್ಲಿ ಯಾವುದೇ ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಧಾರಾವಿಯಲ್ಲಿ ಕೇವಲ 11 ಸಕ್ರಿಯ ಪ್ರಕರಣಗಳಿವೆ. ದಾಖಲಾದ 7005 ಸೋಂಕುಗಳಲ್ಲಿ 6,596 ರೋಗಿಗಳು ಈಗಾಗಲೇ ಚೇರಿಸಿಕೊಂಡಿದ್ದು ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular