ಆಫ್ಘಾನಿಸ್ತಾನ ಮೂರು ಜಿಲ್ಲೆಗಳನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ವಕ್ತಾರರು ಹೇಳಿರುವ ನಡುವೆಯೇ ಇದೇ ಮೊದಲ ಬಾರಿಗೆ ಶಸ್ತ್ರಾಸ್ತ್ರಗಳ ಮೂಲಕ ಪ್ರತಿರೋಧ ಒಡ್ಡಿರುವ ಸ್ಥಳೀಯ ಮಿಲಿಟರಿ ಗುಂಪುಗಳು ಬಾಗ್ಲಾನ್ ಪ್ರಾಂತ್ಯದ ಬಾನೊ, ದೇಹ್ ಸಲೇಹ್, ಪುಲ್ ಇ-ಹೆಸರು ಜಿಲ್ಲೆಗಳನ್ನು ನಿಯಂತ್ರಣಕ್ಕೆ ಪಡೆದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕಾಬೂಲ್ ನಲ್ಲಿ ಸೋಮವಾರ ವಿಮಾನ ನಿಲ್ದಾಣದ ಉತ್ರರ ದ್ವಾರದಲ್ಲಿ ಅಪರಿಚಿತ ಬಂದೂಕುಧಾರಿಗಳು, ಅಮೆರಿಕಾ ಭದ್ರತಾ ಪಡೆಗಳು ಮತತ್ತು ಆಫ್ಘಾನ್ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಆಫ್ಘನ್ ಸಿಬ್ಬಂದಿ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾನಿಸ್ತಾನ ರಾಜಧಾನಿಯಿಂದ ಬ್ರಿಟನ್ ಪ್ರಜೆಗಳನ್ನು ಸ್ಥಳಾಂತರಿಸಲು ಯುಕೆ ಸರ್ಕಾರ ತನ್ನ ಸಿಬ್ಬಂದಿ ಸಂಖ್ಯೆನ್ನು ಕಾಬೂಲ್ ನಲ್ಲಿ ಹೆಚ್ಚಿಸಿದೆ.ವಿದೇಶೀ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ಐವರು ಸಿಬ್ಬಂದಿ ಈಗ ಸೇರಿಕೊಂಡಿದ್ದು ಕಾಬೂಲ್ ನಲ್ಲಿ ಸ್ಥಳಾಂತರಿಸುವ ಕೆಲಸದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ತಾಲಿಬಾನ್ ಯುದ್ದನಿರತ ದೇಶವನ್ನು ವಶಕ್ಕೆಪಡೆದುಕೊಂಡ ನಂತರ ಆಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟು ಇಮ್ಮಡಿಗೊಳಿಸಿದೆ. ಈ ನಡುವೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಇಸ್ಲಾಮಿಸ್ಟ್ ಚಳವಳಿಗಾರರು ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ಒಂದು ವಾರದ ನಂತರ ಹೆಚ್ಚುತ್ತಿರುವ ಆರ್ಥಿಕ ಕುಸಿತವನ್ನು ತಗ್ಗಿಸಲು ತಾಲಿಬಾನ್ ಆಫ್ಘಾನಿಸ್ತಾನ ಕೇಂದ್ರೀಯ ಬ್ಯಾಂಕಿನ ಹಂಗಾಮಿ ಮುಖ್ಯಸ್ಥರನ್ನು ನೇಮಿಸಿದೆ ಎಂದು ವರದಿಯಾಗಿದೆ.
ಹಾಜಿ ಮೊಹಮ್ಮದ್ ಇದ್ರಿಸ್ ಅವರನ್ನು ಕೇಂದ್ರ ಬ್ಯಾಂಕಿನ ಹಂಗಾಮಿ ಗವರ್ನರ್ ಆಗಿ ಆಯ್ಕೆ ಮಾಡಿದ್ದು ಇದು ಯುದ್ದದಿಂದ ದುರ್ಬಲಗೊಂಡಿರುವ ಆರ್ಥಿಕತೆಗೆ ಚೇತರಿಕೆ ತರಲು ಸಹಾಯ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.