ಮಠ, ಎದ್ದೇಳು ಮಂಜುನಾಥದಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ, ನಟ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಾದನಾಯಕಹಳ್ಳಿಯ ಅರ್ಪಾಟ್ಮೆಂಟ್ ನ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಕಂಡುಬಂದಿದ್ದು, 10 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಗುರುಪ್ರಸಾದ್ ನವೆಂಬರ್ 2, 1972ರಲ್ಲಿ ಜನಿಸಿದ್ದು ಅವರಿಗೆ 52 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ನಿರ್ದೇಶಕ, ಬರಹಗಾರ, ನಿರ್ಮಾಪಕ, ನಟ ಹಾಗೂ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.
ಗುರುಪ್ರಸಾದ್ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. 2006ರಲ್ಲಿ ಮಠ ಚಿತ್ರವನ್ನು ನಿರ್ದೇಶಿಸಿದ್ದರು. ಆ ಸಿನಿಮಾ ಹಿಟ್ ಆಗಿತ್ತು. 2009ರಲ್ಲಿ ಎದ್ದೇಳು ಮಂಜುನಾಥ ಸಿನಿಮಾವನ್ನು ಬೆಳ್ಳಿಯ ತೆರೆಗೆ ನೀಡಿದ್ದಾರೆ.
2010ರಲ್ಲಿ ಮೈಲಾರಿ, 2011ರಲ್ಲಿ ಕಳ್ ಮಂಜ, ಹುಡುಗರು, 2014ರಲ್ಲಿ ಕರೋಡ್ ಪತಿ, 2016ರಲ್ಲಿ ಜಿಗರ್ ತಂಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.