ಹೈಟಿಯಲ್ಲಿ ಸಂಭವಿಸಿದ ಭೂಕಂಪನದಲ್ಲಿ 1279 ಸಾವನ್ನಪ್ಪಿದ್ದಾರೆ. 2800 ಮಂದಿ ತೀವ್ರ ಗಾಯಗೊಂಡಿದ್ದಾರೆ. ಏಳು ಸಾವಿರ ಮನೆಗಳು ಧ್ವಂಸಗೊಂಡಿವೆ ಎಂದು ಯುಎಸ್ಎ ಟುಡೇ ವರದಿ ಮಾಡಿದೆ.
ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.2ರಷ್ಟು ದಾಖಲಾಗಿದೆ. ಭೂಕಂಪನದ ತೀವ್ರತೆಗೆ ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ ಎಂದು ಮಾಧ್ಯಮಗಳು ತಿಳಿಸಿವೆ.
ಕೋವಿಡ್-19ನಲ್ಲಿ ಆದ ನಷ್ಟವನ್ನು ಮಾತುಗಳಿಂದ ಹೇಳಲು ಸಾಧ್ಯವಿಲ್ಲ. ಈಗ ಭೂಕಂಪನ ಸಂಭವಿಸಿ ಜನರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಇಂತಹ ಸಂದರ್ಭದಲ್ಲಿ ಮಾನವೀಯ ನೆರವು ಅಗತ್ಯ ಎಂದು ಹೇಳಿದ್ದಾರೆ.
ಹೈಟಿಯಲ್ಲಿ ಭೂಕಂಪನದಿಂದ ತೊಂದರೆಗೀಡಾಗಿರುವ ಜನರ ಪರವಾಗಿ ಸ್ಥಳೀಯರು ಪ್ರಾರ್ಥಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಆಗಲಿ, ಮನೆ ಇಲ್ಲದವರಿಗೆ ನೆರವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.