Monday, September 16, 2024
Google search engine
Homeಮುಖಪುಟಹಿಟ್ಲರ್ ಮನಸ್ಥಿತಿಯ ರಾಜಕಾರಣಿಗಳು ಹೆಚ್ಚಾಗಿದ್ದಾರೆ- ಸಿಎಂ ಸಿದ್ದರಾಮಯ್ಯ

ಹಿಟ್ಲರ್ ಮನಸ್ಥಿತಿಯ ರಾಜಕಾರಣಿಗಳು ಹೆಚ್ಚಾಗಿದ್ದಾರೆ- ಸಿಎಂ ಸಿದ್ದರಾಮಯ್ಯ

ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೆ ಮಾತ್ರವಲ್ಲ ಹೊರಗೂ ಹೋರಾಟಗಾರರಾಗಿದ್ದರು. ಶ್ರಮಿಕರ ಧ್ವನಿಯಾಗಿ ಸೂರ್ಯನಾರಾಯಣ್ ರಾವ್ ಅವರು ಹೋರಾಟ ನಡೆಸುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಮ್ರೇಡ್ ಸೂರ್ಯನಾರಾಣರಾವ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ “ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ‌ ಚಳವಳಿಯ ಪಾತ್ರ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

ಯಾವುದೇ ವಿಚಾರವಾದರೂ ಸರಿ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಅವರ ಮಾತು ಮತ್ತು ಭಾಷಣ ಕೇಳಲು ನಾವು ಕಾತರರಾಗಿರುತ್ತಿದ್ದೆವು ಎಂದರು.

ಸೂರ್ಯನಾರಾಯಣ್ ರಾವ್ ಅವರಿಗೆ ಬದ್ಧತೆ ಮತ್ತು ಕಾಳಜಿ ಇತ್ತು. ಕಮ್ಯುನಿಸ್ಟ್ ಕಾರ್ಯಕರ್ತರು ಸಾಮಾನ್ಯವಾಗಿ ಅಧಿಕಾರಕ್ಕಾಗಿ ಹೆಚ್ಚು‌ ಆಸೆ ಪಡುವವರಲ್ಲ. ಹಾಗಾಗಿ ಅವರು ಕೂಡ ಹೋರಾಟಕ್ಕೆ ಹೆಚ್ಚು ಆಧ್ಯತೆ ಕೊಡುತ್ತಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಸದನದ ಒಳಗೆ ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದರು. ನಾನು ಕಾರ್ಮಿಕ ಸಚಿವನಾಗಿದ್ದಾಗ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವವರೆಗೂ ಕುಳಿತಲ್ಲಿಂದ ಮೇಲೇಳುತ್ತಿರಲಿಲ್ಲ ಎಂದು ಸ್ಮರಿಸಿಕೊಂಡರು.

ಈಗ ಸುಳ್ಳುಗಳನ್ನೇ ಸತ್ಯ ಮಾಡುವ ಹಿಟ್ಲರ್ ಮನಸ್ಥಿತಿಯ ರಾಜಕಾರಣಿಗಳು ಹೆಚ್ಚಾಗಿದ್ದಾರೆ. ದಣಿವರಿಯದ ಹೋರಾಟಗಾರರಾಗಿದ್ದ ಕಾಮ್ರೇಡ್ ಸೂರಿ ಸದಾ ಸತ್ಯದ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತಿದ್ದರು. ಸದನದ ಒಳಗಾಗಲಿ, ಹೊರಗಾಗಲಿ ಶಾಂತಿ ಕದಡುವ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿರಲಿಲ್ಲ ಎಂದು ಹೇಳಿದರು.

ನಮ್ಮ ಸರ್ಕಾರ ದುಡಿಯುವ ವರ್ಗದ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಸದಾ ನಿಮ್ಮ ಪರವಾಗಿ, ಕಾರ್ಮಿಕರ ಪರವಾಗಿ ಇರುತ್ತದೆ. ನಾವು ಕಾರ್ಮಿಕರ ಪರವಾಗಿ ಕಾರ್ಯಕ್ರಮ ರೂಪಿಸಿದ್ದನ್ನು, ಗ್ಯಾರಂಟಿಗಳನ್ನು ನೀಡಿದ್ದನ್ನು ಬಿಜೆಪಿ-ಆರ್ ಎಸ್ ಎಸ್ ನಂತಹ ಬಲಪಂಥೀಯ ಸಂಘಟನೆಗಳು ವಿರೋಧಿಸುತ್ತಿವೆ ಎಂದು ದೂರಿದರು.

ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು.

ಕಾಮ್ರೇಡ್ ಬಿಜೆಕೆ ನಾಯರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಕಾಮ್ರೇಡ್ ಸೂರ್ಯನಾರಾಯಣ್ ಅವರ ಪುತ್ರಿ ರೇಖಾ ಸೇರಿ ಹಲವು ಹೋರಾಟಗಾರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular