ತುಮಕೂರು ನಗರದ ವಿಜ್ಞಾನ ಕಾಲೇಜು ಮುಟ್ಟಿದರೆ ಬಿದ್ದು ಹೋಗತ್ತದೆ. ಅದನ್ನು ಕಟ್ಟಿ ನೂರು ವರ್ಷ ಮೇಲೆ ಆಗಿದೆ. ಹೀಗಾಗಿ ಕಟ್ಟಡ ಕೆಡವಿ ಕಟ್ಟಲು ಅಂದಾಜು ವೆಚ್ಚ ಎಷ್ಟು ಆಗುತ್ತದೆ ಅಂದಾಜು ಪಟ್ಟಿ ಮಾಡಿ ಸಲ್ಲಿಸುವಂತೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ದಿಶಾ ಸಭೆಯಲ್ಲಿ ಮಾತನಾಡಿದ ಅವರು. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮಾಡಿ ಸ್ವಚ್ಚತೆ ಕಾಪಡಬೇಕು ಎಂದರು.
ಸಭೆಯಲ್ಲಿ ರೈತರ ಬೆಳೆ ವಿಮೆಯ ಬಗ್ಗೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ರಮೇಶ್ ಜಿಲ್ಲೆಯ ರೈತರು ಆರು ಕೋಟಿ ಬೆಳೆ ವಿಮೆ ಕಟ್ಟಿದ್ದಾರೆ. ಜಿಲ್ಲೆಯಲ್ಲಿ ಒಂದು ಲಕ್ಷ ಮೂವತ್ತು ಸಾವಿರ ಕ್ಕೂ ಹೆಚ್ಚು ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಸಂಘ ಸಂಸ್ಥೆಗಳ ಮೂಲಕವು ರೈತರ ಬೆಳೆ ವಿಮೆ ನೋಂದವಣೆ ಮಾಡಿಸುತ್ತಿದೇವೆ ಎಂದರು.
ಶಾಸಕ ಚಿದಾನಂದ ಗೌಡ ಮಾತನಾಡಿ ಬೆಳೆ ವಿಮೆ ಕಟ್ಟಿದರೆ ನಮಗೆ ಏನು ಅನುಕೂಲವಾಗುತ್ತಿಲ್ಲ,ರೈತರು ನಂಬಿಕೆ ಕಳೆದು ಕೊಂಡಿದ್ದಾರೆ, ಬೆಳೆ ವಿಮೆ ಕಟ್ಟಿ ಎರಡು ಮೂರು ವರ್ಷವಾದರು ವಿಮೆ ಹಣವನ್ನೇ ಕೊಡುತ್ತಿಲ್ಲ. ಅದಕ್ಕೆ ರೈತರು ವಿಮೆ ಕಂಪನಿಗಳ ಮೇಲೆ ನಂಬಿಕೆ ಇಟ್ಟಲ್ಲ ಎಂದಾಗ ಸೋಮಣ್ಣ ರೈತರಿಗೆ ನಂಬಿಕೆ ಬರುವ ರೀತಿ ವರ್ತನೆಯ ಮಾಡಿ. ಅವರಿಗೆ ಸರಿಯಾದ ಸಮಯಕ್ಕೆ ವಿಮಾ ಪರಿಹಾರ ಕೋಡಿಸಿ ಎಂದು ಹೇಳಿದರು.
ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ಸಿರಿಧಾನ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ಉತ್ತೇಜನ ನೀಡಲು ಸಲಹೆ ನೀಡಿದರು. ಎರಡು ಕೋಟಿ ನಲವತ್ತೈದು ಲಕ್ಷ ರೂಪಾಯಿಗಳನ್ನು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹದಾಯಕವಾಗಿ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ರಮೇಶ್ ಸಭೆಗೆ ಮಾಹಿತಿ ನೀಡಿದರು.
ದಿಶಾ ಸಭೆಯಲ್ಲಿ ಗ್ರಾಮಾಂತರ ಸಂಸದ ಡಾ.ಮಂಜುನಾಥ್, ಶಾಸಕರಾದ ಎಂ ಟಿ ಕೃಷ್ಣಪ್ಪ, ಸುರೇಶ್ ಗೌಡ, ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಆಶೋಕ್, ಜಿ ಪಂ ಸಿ ಇಓ ಪ್ರಭು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.