Friday, November 22, 2024
Google search engine
Homeಮುಖಪುಟಮುಡಾದಲ್ಲಿ ಸೈಟು ಹೊಡೆದವರಿಂದಲೇ ಸಿಎಂ ಮೇಲೆ ಆರೋಪ

ಮುಡಾದಲ್ಲಿ ಸೈಟು ಹೊಡೆದವರಿಂದಲೇ ಸಿಎಂ ಮೇಲೆ ಆರೋಪ

ಮುಡಾದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸೈಟ್ ಪಡೆದಿರುವವರೇ ಇಂದು ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ದ ಮಾಡಿರುವ ಆರೋಪ ಅಹಿಂದ ವರ್ಗದ ಮೇಲೆ ಮಾಡಿರುವ ಆರೋಪವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡ್ಡಿಯೂರಪ್ಪ ಅವರ ಕಾಲದಲ್ಲಿ ಮುಡಾ ಏನು ಆಗಿದೆ. ಆರೋಪ ಮಾಡುವವರೆ ಮುಡಾದ ಫಲನುಭವಿಗಳು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಕ್ಲಿನ್ ಇಮೇಜ್ ಗೆ ಧಕ್ಕೆ ತರುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಿಜೆಪಿ ಮುಖಂಡರು ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆದಾಗ ಅವರನ್ನು ಕಳಕಿಂತರು ಎಂದು ಬಿಂಬಿಸುವುದು ನಡೆದುಕೊಂಡು ಬರುತ್ತಿದೆ. ಇದು ಮುಂದುವರೆದ ಜನಾಂಗದವರು ಮಾಡುತ್ತಿರುವ ಹೀನ ಕೃತ್ಯ ಎಂದು ತಿರುಗೇಟು ನೀಡಿದರು.

ಬಿಜೆಪಿಯವರು ಮುಡಾ ಪ್ರಕರಣ ಮುಂದಿಟ್ಟುಕೊಂಡು ಮೈಸೂರುವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಪ್ರತಿಭಟನಾ ಪಾದಯಾತ್ರೆ ಮಾಡಿದರೆ, ನಾವು ಸುಮ್ಮನೆ ಕೂರುವುದಿಲ್ಲ. ನಾವು ಸಹ ತುಮಕೂರು ಜಿಲ್ಲೆಯಲ್ಲಿಯೂ ಸೇರಿದಂತೆ ರಾಜ್ಯದ್ಯಾಂತ ಅಹಿಂದದವರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುತ್ತೇವೆ.
ನೇಮಕಾತಿಯಲ್ಲಿ ಸಹ ರೋಸ್ಟರ್ ಮಾಡಲಾಗುವುದು. ಸಹಕಾರಿ ಚುನಾವಣೆಯಲ್ಲಿ ಸಹ ಸ್ಪರ್ಧೆ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದರು. ರಾಜ್ಯದಲ್ಲಿ ಅತಿವೃಷ್ಠಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಮುಖಂಡರು ಇದರ ಬಗ್ಗೆ ಚರ್ಚೆಯನ್ನೇ ಮಾಡದೆ ಕಾಲಹರಣ ಮಾಡಿದರು ಎಂದು ದೂರಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಈಗಾಗಲೇ ಮೂರು ತನಿಖಾ ಸಂಸ್ಥೆ ಗಳು ತನಿಖೆ ನಡೆಸುತ್ತಿವೆ. ಮುಡಾದಿಂದ ಯಾರ್ಯಾರು ಸೈಟುಗಳು ತೆಗೆದುಕೊಂಡಿದ್ದಾರೆ, ಅವರೆಲ್ಲಾ ವಾಪಸು ನೀಡಲಿ, ಅದು ಬಿಟ್ಟು ಒಬ್ಬರ ಮೇಲೆ ದೂರುವುದು ಸರಿಯಲ್ಲ ಎಂದು ತಿಳಿಸಿದರು.

ಬಿಜೆಪಿಯೇತರ ಸರ್ಕಾರ ಗಳನ್ನು ಕೆಳಗಿಳಿಸುವುದೆ‌ ಬಿಜೆಪಿಯ ಉದ್ದೇಶ. ಜಾರ್ಖಂಡ್ ಅದು ನಡೆದಿದೆ. ಅರವಿಂದ ಕೇಜ್ರಿವಾಲ್ ಅವರ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ಶೇ. 90ರಷ್ಟು ಬಿಜೆಪಿಯೇತರ ಮುಖಂಡರ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ವೇಣುಗೋಪಾಲ ಮಾತನಾಡಿ ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುವ ವಿಜಯೇಂದ್ರ ಮೊದಲು ಬುದ್ದಿ ಕಲಿಯಲಿ. ಯಡಿಯೂರಪ್ಪ ಜೈಲಿಗೆ ಹೋಗಲು ವಿಜಯೇಂದ್ರ ಕಾರಣ ಅಲ್ಲವೇ? ಎಂದು ಪ್ರಶ್ನಿಸಿದ ಅವರು ಭೂತದ ಬಾಯಿಂದ ಭಗವದ್ಗೀತೆ ಕೇಳುವ ಅನಿವಾರ್ಯ ನಮಗಿಲ್ಲ ಎಂದು ತಿರುಗೇಟು ನೀಡಿದರು ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಟಿ.ಪಿ, ಮಂಜುನಾಥ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular