Friday, November 22, 2024
Google search engine
Homeಜಿಲ್ಲೆಗುಬ್ಬಿ ವೀರಣ್ಣ ಸ್ಮಾರಕ ಪುನರುಜ್ಜೀವನಗೊಳಿಸಲು ಆಗ್ರಹ

ಗುಬ್ಬಿ ವೀರಣ್ಣ ಸ್ಮಾರಕ ಪುನರುಜ್ಜೀವನಗೊಳಿಸಲು ಆಗ್ರಹ

ಕನ್ನಡ ರಂಗಭೂಮಿಯ ಸರ್ವಶ್ರೇಷ್ಟ ನಟರೂ ಪದ್ಮಶ್ರೀ ಪುರಸ್ಕೃತರೂ ಆಗಿದ್ದ ತುಮಕೂರು ಜಿಲ್ಲೆಯ ಗುಬ್ಬಿ ವೀರಣ್ಣನವರ ಸ್ಮಾರಕವನ್ನು ಪುನರುಜ್ಜೀವನಗೊಳಿಸಬೇಕೆಂದು ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ನಟ ರತ್ನಾಕರ ಡಾ. ಗುಬ್ಬಿ ವೀರಣ್ಣನವರ ಹೆಸರು ಕರ್ನಾಟಕ ಮಾತ್ರವಲ್ಲದೆ ಭಾರತೀಯ ರಂಗಭೂಮಿಯಲ್ಲಿಯೂ ಚಿರಸ್ಥಾಯಿಯಾಗಿದೆ.
ಶ್ರೀಯುತರ ಮರಣಾನಂತರ ಅವರ ಮತ್ತು ಅವರ ಧರ್ಮ ಪತ್ನಿ ಬಿ. ಜಯಮ್ಮನವರ ಸಮಾಧಿಗಳು. ತುಮಕೂರು ಜಿಲ್ಲಾ ವ್ಯಾಪ್ತಿಯ ಗುಬ್ಬಿ ಪಟ್ಟಣದಲ್ಲಿರುವುದು ತಮಗೆ ತಿಳಿದ ವಿಚಾರ. ಈ ಸಮಾಧಿಗಳು ಮಳೆಯ ಕಾರಣದಿಂದ ನೀರು ನಿಂತು ಶಿಥಿಲವಾಗುತ್ತಿದೆ. ಜೊತೆಗೆ ಗಿಡಗಂಟಿಗಳು ಬೆಳೆದು ಯಾರೂ ಒಳಗಡೆ ಪ್ರವೇಶ ಮಾಡದ ಹಾಗಾಗಿದೆ ಎಂದು ಹೇಳಿದ್ದಾರೆ.

ಸಾವಿರಾರು ರಂಗಾಭಿಮಾನಿಗಳಿಗೆ ಇಂದಿಗೂ ಸ್ಪೂರ್ತಿಯ ಚೇತನವಾಗಿರುವ ವೀರಣ್ಣನವರ ಸ್ಮಾರಕವನ್ನು ಸಾರ್ವಜನಿಕರು ಒಳಗೆ ಪ್ರವೇಶಿಸಿ ದರ್ಶನ ಪಡೆಯಲು ಅನುಕೂಲವಾಗುವಂತೆ ಈ ಸ್ಥಳವನ್ನು ನವೀಕರಿಸಿ ಪುನರುಜ್ಜೀವನಗೊಳಿಸಬೇಕೆಂದು ನಾಗರಾಜಮೂರ್ತಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಗುಬ್ಬಿಯ ತಹಶೀಲ್ದಾರ್ ಅವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಬೇಕಾಗಿದೆ ವಿನಂತಿಸಿದ್ದಾರೆ. ಈ ಸಂಬಂಧ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಝೆನï ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸï ಅವರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ ಅವರಿಗೆ ಮನವಿ ಪತ್ರ ನೀಡಿದರು. ಜಿ.ಪಂ. ಸಿಇಓ ಪ್ರಭು, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ನರಸಿಂಹದಾಸ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular