Sunday, September 8, 2024
Google search engine
Homeಮುಖಪುಟಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ-ಆರೋಪ

ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ-ಆರೋಪ

ಕೇಂದ್ರದ ಬಜೆಟ್ ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ, ಚೆಂಬು ನೀಡಿದೆ ಎಂದು ಆಪಾದಿಸಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಭದ್ರಮ್ಮ ವೃತ್ತಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ತಲೆಯ ಮೇಲೆ, ಕೈಯಲ್ಲಿ ಚೊಂಬು ಹಿಡಿದುಕೊಂಡು ಕೇಂದ್ರ ಸರ್ಕಾರ ಈ ಬಾರಿಯೂ ಕರ್ನಾಟಕ ರಾಜ್ಯಕ್ಕೆ ಚೆಂಬು ನೀಡಿದೆ. ರಾಜ್ಯದಿಂದ ಬಿಜೆಪಿಯ 19 ಜನ ಸಂಸದರು ಆಯ್ಕೆಯಾಗಿ, ನಾಲ್ವರು ಸಚಿವರಾಗಿದ್ದರೂ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಮುಂದುವೆರಿಸಿದೆ ಎಂದು ಆಪಾದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಕೇಂದ್ರ ಸರ್ಕಾರದಲ್ಲಿ ರಾಜ್ಯದ 4 ಜನ ಮಂತ್ರಿಗಳಿದ್ದಾಗ್ಯೂ ರಾಜ್ಯಕ್ಕೆ ಬಿಜೆಪಿಯಿಂದ ಘನ ಘೋರ ಅನ್ಯಾಯವಾಗಿದೆ. ಮಿತ್ರ ಪಕ್ಷಗಳಿಂದ ಕುರ್ಚ ಉಳಿಸಿಕೊಳ್ಳಲು ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಬಜೆಟ್ ನ ಬಹುಪಾಲು ನೀಡಿ, ಕರ್ನಾಟಕ ರಾಜ್ಯವನ್ನು ಕಡೆಗಣಿಸಲಾಗಿದೆ. ಇದರ ವಿರುದ್ದ ಮುಂದಿನ ಮೂರು ದಿನಗಳ ಕಾಲ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು.

ರಾಜ್ಯದ ಮೇಕುದಾಟು ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಚಾಲ್ತಿಯಲ್ಲಿದ್ದ ಹಲವಾರು ಯೋಜನೆಗಳಿಗೆ ಅನುದಾನ ನೀಡಿಲ್ಲ. ಸಚವ ಸೋಮಣ್ಣ ಅವರ ಆರಂಭ ಶೂರತ್ಯ ಕೆಲವೇ ದಿನಗಳಲ್ಲಿ ಬಯಲಾಗಲಿದೆ. ರಾಜ್ಯದ ಜನತೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ. ರಾಜ್ಯದ ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ರಾಜ್ಯದ 4.50 ಲಕ್ಷ ಕೋಟಿಗೂ ಹೆಚ್ಚು ಜಿಎಸ್ಟಿ ಬಾಚಿಕೊಂಡು, ಉತ್ತರ ಭಾರತದ ಬಿಹಾರ ವನ್ನು ಉದ್ದಾರ ಮಾಡಲು ಹೊರಟಿದೆ. ಜಿಎಸ್ಟಿ ಪಾಲು ಪಡೆಯಲು ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರತಿಭಟನೆ ನಡಸಿಯೂ ಪ್ರಯೋಜನ ವಾಗದೆ, ಕೋರ್ಟ್ ಮೇಟ್ಟಿಲೇರಿ, ರಾಜ್ಯದ ಪಾಲು ಪಡೆಯುವಂತಹ ಸ್ಥಿತಿ ತಲುಪಿರುವುದು ಕೇಂದ್ರದ ಇಬ್ಬಗೆಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ರೈತರ ಬಹುದಿನದ ಬೇಡಿಕೆ ಎಂ.ಎಸ್.ಪಿ. ಕಾಯ್ದೆ ಜಾರಿಗೆ ತರದೆ ಮೋಸ ಮಾಡಿದೆ. ಅಲ್ಲದೆ ಶಿಕ್ಷಣ,ಆರೋಗ್ಯ ಕ್ಷೇತ್ರಗಳ ಅನುದಾನ ಕಡಿತ ಮಾಡಿ, ಜನರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ಮಾತನಾಡಿ, ಸಂವಿಧಾನ ಪ್ರಕಾರ ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು. ಆದರೆ ಉತ್ತರ ಭಾರತಕ್ಕೆ ಒಂದು ರೀತಿ, ದಕ್ಷಿಣ ಭಾರತಕ್ಕೆ ಒಂದು ರೀತಿ ಎಂಬಂತಹ ತಾರತಮ್ಯ ನೀತಿಯನ್ನು ಕೇಂದ್ರ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಹೆಚ್.ಸಿ.ಹನುಮಂತಯ್ಯ, ವಾಲೆಚಂದ್ರಯ್ಯ, ತರುಣೇಶ್, ಅಸ್ಲಾಂಪಾಷ, ಮಂಜುನಾಥ್, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸುಜಾತ, ಸಂಜೀವಕುಮಾರ್, ನಟರಾಜಶೆಟ್ಟಿ, ಜ್ವಾಲಮಾಲ ರಾಜಣ್ಣ, ರೇವಣ್ಣಸಿದ್ದಯ್ಯ, ಬೋವಿಪಾಳ್ಳ ಉಮೇಶ್, ಕೈದಾಳ ರಮೇಶ್, ಶಿವಾಜಿ, ಗೀತಾ, ಭಾಗ್ಯಮ್ಮ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular