ಸರ್ಕಾರಿ ಶಾಲ ಕಾಲೇಜುಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಬೇಕು ಎಂದು ಸರ್ಕಾರ ತಿರ್ಮಾನ ಮಾಡಿದೆ. ಶಿಕ್ಷಕರ ನೇಮಕಾತಿಗೂ ಸಹ ಸರ್ಕಾರ ಮುಂದಾಗಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಮನವಿ ಮಾಡಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಡಿಸೆಂಬರ್ 3 ರಂದು ಮತದಾನ ನಡೆಯಲಿದೆ. ಒಟ್ಟು ಶಿಕ್ಷಕರ ಕ್ಷೇತ್ರದ ಚುನಾವಣೆಗೆ 23,534 ರಷ್ಟು ಮತದಾರರಿದ್ದು ತುಮಕೂರು ಜಿಲ್ಲೆಯೊಂದರಲೇ 7500 ರಷ್ಟು ಮತದಾರರಿದ್ದಾರೆ. ತಮಕೂರು ನಗರವೊಂದರಲೇ 3500 ಮತದಾರರಿದ್ದು ಮತದಾನದಂದು ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ರವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಡಿ.ಟಿ. ಶ್ರೀನಿವಾಸ್ ಅವರು ಮಾಜಿ ಅಧಿಕಾರಿಯಾಗಿದ್ದವರು. ಈಗ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಸಂಪೂರ್ಣ ಅರಿವು ಅವರಿಗೆ ಇದೆ. ಅದ್ದರಿಂದ ಶಿಕ್ಷಕ ಮತದಾರರು ಡಿಸೆಂಬರ್ 3 ರಂದು ನಡೆಯುವ ಮತದಾನದಂದು ಹೆಚ್ಚು ಮತಗಳನ್ನು ಡಿ.ಟಿ. ಶ್ರೀನಿವಾಸ್ ಅವರಿಗೆ ನೀಡಿ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇಕ್ಬ್‌ಲ್ ಆಹಮ್ಮದ್, ವಕ್ತಾರೆ ಸುಜಾತ, ಸೇರಿದಂತೆ ಶಿಕ್ಷಕರ ಕ್ಷೇತ್ರದ ಮುಖಂಡರು ಹಾಜರಿದ್ದರು.