ಸಿರಾ ಸೀಮೆಯಲ್ಲಿ ಸಿನಿಮಾವೊಂದರ ಮುಹೂರ್ತ ನಿನ್ನೆ ನೆರವೇರಿತು. ತೊಗರಗುಂಟೆಯ ಅಮ್ಮಾಜಿ ದೇವಸ್ಥಾನ ಪಕ್ಕದ ಆಲದ ಮರದ ವಿಶಾಲ ಬಿಳಿಲುಗಳ ನಡುವೆ ಕಲಾತ್ಮಕ ಸೆಟ್ ನಿರ್ಮಾಣವಾಗಿದೆ.
ಸಿನಿಮಾ ‘ಚಕ್ರಾಂಕ’. ಶತಮಾನಗಳಷ್ಟು ಹಿಂದಿನ ರಾಜಮನೆತನ, ಯುದ್ಧ, ಬುಡಕಟ್ಟು ಸಮೀಪದ ಸಮುದಾಯವನ್ನು ಒಳಗೊಂಡ ಕಾಲ್ಪನಿಕ ಕಥೆ. ಕಥೆ ಪರಿಕಲ್ಪನೆ ನಿರ್ದೇಶನ ನೀನಾಸಂನಲ್ಲಿ ಕಲಿತ ಶ್ರೀನಿವಾಸ ಮೂರ್ತಿ. ನಿರ್ಮಾಪಕರು ಮಧುಗಿರಿ ತಾಲ್ಲೂಕು ಕುರುಬರಹಳ್ಳಿಯ ಹರ್ಷ. ಸಬ್ ಇನ್ಸ್ಪೆಕ್ಟರ್ ಆಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶಿ ಸಂಸ್ಥೆ ನಡೆಸಿದ ಅನುಭವವುಳ್ಳ ಯುವಕರಾದ ಹರ್ಷ, ಸಧ್ಯ ಲೇ ಹೌಟ್ ನಿರ್ಮಾಣದ ವ್ಯವಹಾರದಲ್ಲಿ ತೊಡಗಿ ಶಿರಾದಲ್ಲೇ ವಾಸವಿದ್ದಾರೆ.
ನಾಯಕ ನಟರಾಗಿ ನೀನಾಸಂನಲ್ಲಿ ಅಭಿನಯ ತರಬೇತಿ ಪಡೆದ ನಂದಕುಮಾರ್ ಇದ್ದರೆ, ಬಹುತೇಕ ಅಧುನಿಕ ರಂಗಭೂಮಿಯ ನಟರೇ ಇದ್ದಾರೆ.
ಮೂಹೂರ್ತಕ್ಕೆ ಸಿನಿಮಾ ಕ್ಷೇತ್ರದ ಸೂಕ್ಷ್ಮ ಬರಹಗಾರರಾದ ಜೋಗಿ, ಸ್ಥಳೀಯ ಶಾಸಕರು ಹಾಗೂ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಜಯಚಂದ್ರ, ಸಚಿವರಾದ ಕೆ.ಎನ್.ರಾಜಣ್ಣ ಬಂದಿದ್ದರು. ಸ್ಥಳೀಯರಾದ ನಾವು ಸಿನಿಮಾ ಸೂಪರ್ ಹಿಟ್ ಆಗಲಿ ಅಂತ ಶುಭ ಹೇಳೋಣಾ…