ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಯಂತೆಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು. ಅದು ರೈತರಿಗೆ ಲಾಭದಾಯಕ. ಹಾಗಾಗಿ ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂದು ಕೃಷಿ ಆರ್ಥಿಕತಜ್ಞ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಒತ್ತಾಯಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತ ಬೆಳೆಗೆ ಲಾಭದಾಯಕ ಕಾನೂನಿನ ಖಾತ್ರಿಯ ಬೆಂಬಲ ಬೆಲೆ ನೀಡುವಂತೆ ರೈತರ ಹೊಸ ಹಕ್ಕೊತ್ತಾಯ ಕೇಳಿಬರುತ್ತಿದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದನ್ನು ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಆಶ್ವಾಸನೆ ನೀಡಿರುತ್ತಾರೆ ಎಂದರು.
ಬಿಜೆಪಿ ಬೆಳೆ ವೈವಿಧ್ಯಗೊಳಿಸುವುದಾದರೆ ಹಾಗೂ ನೊಂದಾಯಿಸಿದ ರೈತರಿಂದ ಬೆಂಬಲ ಬೆಲೆಯಲ್ಲೇ ದ್ವಿದಳ ಧಾನ್ಯ ಜೋಳ, ಹತ್ತಿ ಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿರುತ್ತದೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಭಾವನಾತ್ಮಕ ವಿಚಾರಗಳು, ವಿಭಜಕ ನಿರೂಪಣೆಗಳಿಂದ ರೈತರು ಹಿಂದೆ ಸರಿದುಗಂಭೀರ ಸಮಸ್ಯೆಗಳು ಮುನ್ನೆಲೆಗೆತರುವ ಬಗ್ಗೆ ಚಿಂತಿಸ ಬೇಕಿದೆ ಎಂದರು.
ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಬಲ ಬೆಲೆ ಖಾತರಿಸುವ ನಿಟ್ಟಿನಲ್ಲಿ ವಿವರಅಧ್ಯಯನ ನಡೆಸಿ 2018ರ ವಿಸ್ತçತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರಅನುಷ್ಠಾನಕ್ಕೆ ತಗಲುವ ಹೊರೆ ಅಧಿಕವೇನು ಆಗಲಾರದೆಂದು ಲೆಕ್ಕಾಚಾರ ಹಾಕಿದ್ದು ಸರ್ಕಾರ ಸಕಾಲದಲ್ಲಿ ಮಧ್ಯಪ್ರವೇಶಿಸಿ ಖರೀದಿ ಮುಂತಾದ ಕ್ರಮಕೈಗೊಂಡಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗುವಂತೆ ಮಾಡುವುದು ಕಷ್ಟ ಸಾಧ್ಯವಲ್ಲ ಎಂದು ಸ್ಪಷ್ಟಪಡಿಸಿರುತ್ತದೆ. ಹಾಗೆಯೇ ಖರೀದಿಸುವುದನ್ನು ಸದುಪಯೋಗಪಡಿಸಿಕೊಳ್ಳುವ ದಾರಿಯನ್ನು ಸೂಚಿಸಲಾಗಿರುತ್ತದೆ ಎಂದು ತಿಳಿಸಿದರು.
ಆಹಾರ ಉತ್ಪಾದನೆಯ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಹಸಿವು, ಅಪೌಷ್ಟಿಕತೆಗಳನ್ನು ಹೊಡೆದೋಡಿಸುವ ಜವಾಬ್ದಾರಿಗಳು ದೇಶದ ಮಂದಿರುವಾಗ ರೈತರ ಈ ನ್ಯಾಯಯುತ ಬೇಡಿಕೆಯನ್ನುಈಡೇರಿಸುವುದು ಒಂದು ನೈತಿಕ ಹೊಣೆಗಾರಿಕೆಯಾಗಿದೆ ಹಾಗಿದ್ದರೂ, ಸರ್ಕಾರದ ಈ ಮಧ್ಯ ಪ್ರವೇಶದಿಂದ ಮಾರುಕಟ್ಟೆ ವ್ಯವಸ್ಥೆ ದಾರಿ ತಪ್ಪುತ್ತದೆ. ಸರ್ಕಾರದ ಮೇಲೆ ಖರೀದಿಯ ಹೊರೆ ಜಾಸ್ತಿಯಾಗುತ್ತದೆ, ಇತ್ಯಾದಿ ಇಲ್ಲ-ಸಲ್ಲದ ಆತಂಕ ಅನುಮಾನಗಳನ್ನು ಮುಕ್ತ ಮಾರುಕಟ್ಟೆಯ ಅಂಧಪ್ರತಿಪಾದಕರು ವ್ಯಕ್ತಪಡಿಸುತ್ತಿರುವರು ಹಾಗಾಗಿ ತಮ್ಮ ಕೂಗು ಗಟ್ಟಿಯಾಗಿ ಮತಪಟ್ಟಿಗೆಯ ಮೇಲೆ ಪ್ರಭಾವ ಬೀರಿದರೆ ಮಾತ್ರ ಈ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಕೃಷಿ, ತಾಂತ್ರಿಕತೆ ಜೊತೆಗೆ ರೈತ ಬೆಳೆದ ಬೆಳೆಗೆ ಲಾಭದಾಯಕ ಬೆಲೆ ಬೇಕು ಬೆಂಬಲ ಬೆಲೆ ತಾಂತ್ರಿಕ ವಿಚಾರವಲ್ಲ. ನಮ್ಮ ದೇಶ ಆಹಾರ ಉತ್ಪಾದನೆಗಳಲ್ಲಿ ಸ್ವಾವಲಂಬಿಯಾಗಿದ್ದು ಅಂದಿನಂತೆ ವಿದೇಶಗಳಿಂದ ಹಣದು ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲ. ಆದರೂ ದೇಶದಲ್ಲಿ ಶೇಕಡ 20ರಷ್ಟು ಹಸಿವು ಜನರನ್ನುಕಾಡುತ್ತಿದೆ. ಹಲವಾರು ಬಿಕ್ಕಟ್ಟಿನಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಕಾನೂನಿನ ಚೌಕಟ್ಟಿನಲ್ಲಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ರೈತ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದು ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ವಲಯಗಳನ್ನಾಗಿ ಮಾಡುತ್ತಿದ್ದು ಇದರ ವಿರುದ್ಧವಾಗಿ 2020ರಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸುಮಾರು 400ಕ್ಕೂ ಅತಿ ಹೆಚ್ಚು ರೈತ ಸಂಘಗಳು ಕೃಷಿ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದ್ದನ್ನು ಇಡೀ ದೇಶ ನೋಡಿದೆ. ಆದರೂ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದರು.