Friday, November 22, 2024
Google search engine
Homeಮುಖಪುಟಕಾವೇರಿ ವಿಚಾರ - ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹ

ಕಾವೇರಿ ವಿಚಾರ – ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹ

ನ್ಯಾಯಲಯವು ನೀರಿನ ವಿಚಾರದಲ್ಲಿ ಮದ್ಯ ಪ್ರವೇಶ ಮಾಡುವಂತಿಲ್ಲ ಎಂದು ಸಂವಿಧಾನದ ಅರ್ಟಿಕಲ್ 262 ರಲ್ಲಿ ಉಲ್ಲೇಖವಿದೆ. ಸಂವಿಧಾನದಲ್ಲಿ ಲೋಪವಿದ್ದಾಗ ಸುಪ್ರೀಂಕೋರ್ಟ್ ಮದ್ಯ ಪ್ರವೇಶ ಮಾಡಬಹುದು ಎನ್ನುವ ಉಲ್ಲೇಖವಿದೆ. ಸಮಿತಿಯ ಯಾವ ಸದಸ್ಯನೂ ಸ್ಥಳಕ್ಕೆ ಬಂದು ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿಲ್ಲ. ಆದರೂ ಕರ್ನಾಟಕದ ವಿರುದ್ದ ತೀರ್ಪು ನೀಡಿದ್ದಾರೆ. ಕರ್ನಾಟಕದ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದರು ಹಿನ್ನಡೆಯಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಕಾವೇರಿ ನೀರಾವರಿ ನಿರ್ವಹಣಾ ಸಮಿತಿ ಹಾಗು ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಅಧ್ಯಕ್ಷರೂ ಸೇರಿ 9 ಜನ ಸದಸ್ಯರು ಇರುತ್ತಾರೆ. ಇವರಲ್ಲಿ ಅಧ್ಯಕ್ಷರನ್ನು ಸೇರಿ 5 ಜನರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡುತ್ತದೆ. ಈ ಸಮಿತಿಯ ಕೆಲಸ ಕಾವೇರಿ ಜಲಾನಯನ ಪ್ರದೇಶದಲ್ಲಿ ಎಷ್ಟು ಮಳೆ ಬೀಳುತ್ತದೆ, ಒಳಹರಿವು, ಹೊರ ಹರಿವು ಎಷ್ಟಿದೆ ಎಂಬುದನ್ನು ಪ್ರತಿದಿನ ಮಾಹಿತಿ ಕಲೆ ಹಾಕಬೇಕು. ಆದರೆ ಇದನ್ನು ಮಾಡದೆ ನಮಗೆ ಮಾರಕವಾದ ತೀರ್ಪು ನೀಡಲಾಗಿದೆ ಎಂದಿದ್ದಾರೆ.

ಕೂಡಲೇ ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಮಂತ್ರಿಗಳು ಮದ್ಯಸ್ಥಿಕೆವಹಿಸಬೇಕು. 4 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ನಡುವೆ ಸಂಧಾನ ಮಾಡಬೇಕು. ಬಿಜೆಪಿಯ ಯಾವ ಸಂಸದನಿಗೂ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ. ನಮ್ಮನ್ನು ಕೇಳಿ ನೀರು ಬಿಟ್ಟಿದ್ದೀರಾ ಎನ್ನುವ ಉಡಾಫೆಯ ಮಾತುಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಡಿದ್ದಾರೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟಿಗೆ ಮೊದಲೇ ಅರ್ಜಿ ಹಾಕಬೇಕಿತ್ತು ಎಂದು ಬೊಮ್ಮಾಯಿ ಅವರು ಹೇಳುತ್ತಾರೆ, ಆದರೆ ಸುಪ್ರೀಂ ಕೋರ್ಟಿಗೆ ಈ ವಿಚಾರದಲ್ಲಿ ಸೀಮಿತಿ ಅಧಿಕಾರ ಮಾತ್ರವಿದೆ. ಇದು ಕಾನೂನಿನ ವಿರುದ್ದವಾಗಿ ಸಲಹೆ ನೀಡುವ ಕೆಲಸ. ಬೊಮ್ಮಾಯಿ ಅವರು ಸ್ವಲ್ಪ ಅಧ್ಯಯನ ಮಾಡಲಿ. ಮುಖ್ಯಮಂತ್ರಿಗಳಾಗಿದ್ದಾಗ ತರಾತುರಿಯಲ್ಲಿ ಎಸ್ಸಿ- ಎಸ್ಟಿ ಮೀಸಲಾತಿ ತಂದರು, ಅದೇ ರೀತಿ ಮಹಿಳಾ ಮೀಸಲಾತಿಯನ್ನು ತರಾತುರಿಯಲ್ಲಿ ತರುವುದಕ್ಕೆ ಮೋದಿಯವರಿಗೆ ಬೊಮ್ಮಾಯಿ ಅವರ ಪ್ರಭಾವ ತಟ್ಟಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಪ್ರಕಾಶ್ ರಾಥೋಡ್ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ತರಾತುರಿಯಲ್ಲಿ ತಂದಂತಹ ಬಿಲ್. ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಂಡಿಲ್ಲ, ಸರಿಯಾದ ಚರ್ಚೆ ಮಾಡಿಲ್ಲ. ಮೋದಿಯವರ ಜುಮ್ಲಾಗಳಿಗೆ ಇದು ಹೊಸ ಸೇರ್ಪಡೆ, 20 ವರ್ಷಗಳಾದರೂ ಈ ಬಿಲ್ ಜಾರಿಗೆ ತರಲು ಆಗುವುದಿಲ್ಲ. ಮಹಿಳೆಯರಿಗೆ ಮೋಸ ಮಾಡಿದ ಸರ್ಕಾರ ಎಂದು ಹೇಳಿದ್ದಾರೆ.

ಮಹಿಳೆಯರು ಸಹ ಇದನ್ನು ವಿರೋಧಿಸುತ್ತಾರೆ. ರಾಹುಲ್ ಗಾಂಧಿ ಅವರು ಹೇಳಿದ್ದಾರೆ, ಈ ಮೀಸಲಾತಿ ಬಿಲ್ ಅಪೂರ್ಣವಾದ್ದು ಏಕೆಂದರೆ ಹಿಂದುಳಿದ ವರ್ಗದವರಿಗೆ ಎಷ್ಟು ಮೀಸಲಾತಿ ನೀಡುತ್ತೇವೆ ಎನ್ನುವ ಸ್ಪಷ್ಟತೆ ಇಲ್ಲ. ಪ್ರಧಾನಿ ಕಚೇರಿಯಲ್ಲಿ ಕೇವಲ 3 ಮಂದಿ ಓಬಿಸಿ ಅಧಿಕಾರಿಗಳು ಮಾತ್ರ ಇದ್ದಾರೆ ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular