ಕಾಂಗ್ರೆಸ್ ನನಗೆ ತಾಯಿ ಇದ್ದಂತೆ. ಮಗ ಏನು ಕೇಳುತ್ತಾನೋ ಅದನ್ನು ಕೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ತಾಯಿ ಕಾಂಗ್ರೆಸ್ ಪಕ್ಷವೇ ಆಗಿದೆ. ನನ್ನ ಬಳಿ ನಂಬರ್ ಗಳು ಇಲ್ಲದೇ ಇರಬಹುದು. ಆದರೆ ಗೆದ್ದ ಶಾಸಕರಿದ್ದಾರೆ ಎಂದು ಪುನರುಚ್ಚರಿಸಿದರು.
ನನಗೆ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮೇಲೆ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಏಕಾಂಗಿಯಾಗಿಯೇ ಹೋರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಮಗೆ ದೊಡ್ಡ ಶಕ್ತಿ ಇದ್ದಂತೆ, ಕಾಂಗ್ರೆಸ್ ಪಕ್ಷ ದೇವಸ್ಥಾನವಿದ್ದಂತೆ ಎಂದು ತಿಳಿಸಿದ್ದಾರೆ.