ಸಿದ್ದು ಪಟ್ಟು ಮತ್ತು ಡಿಕೇಶಿ ಪಟ್ಟುಗಳ ನಡುವೇ ಅವರ ಘನವ್ಯಕ್ತಿತ್ವ ಮತ್ತು ಮಾತುಗಳನ್ನು ಇಬ್ಬರಿಗೂ ನೆನಪು ಮಾಡಿಕೊಡಿ,ಪಟ್ಟು ಸಡಿಲಿಸಿ ತಮ್ಮ ಮಾತುಗಳಂತೆ ಹಿರಿತನ ಮೆರೆದರೂ ಮೆರೆದಾರು…
ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮಾನ್ಯ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ದಲಿತರ ಮೇಲೆ ಗೌರವ ಇದ್ದರೆ ಈಗ ದಲಿತರನ್ನು ಮುಖ್ಯಮಂತ್ರಿ ಮಾಡಲಿ?ಎಂದು ಸವಾಲು ಹಾಕಿದ್ದರು.
ಈಗ ಆ ಕಾಲ ಕೂಡಿ ಬಂದಿದೆ ಸಿದ್ದರಾಮಯ್ಯರವರ ನಡೆ-ನುಡಿ ವ್ಯಕ್ತಿತ್ವಕ್ಕೆ ಒಂದೊಳ್ಳೆ ಅವಕಾಶ ಮಾತು ಉಳಿಸಿಕೊಳ್ಳಲು.
ಡಿ.ಕೆ.ಶಿವಕುಮಾರ್ ಅವರು ಸಹ ಮೊನ್ನೆ ನಡೆದ ಒಂದು ಸಭೆಯಲ್ಲಿ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಆಗ ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆದರೆ ಅವರ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತೇವೆ ಎಂದಿದ್ದರು.
ಡಿ.ಕೆ.ಶಿ ಅವರಿಗೊಂದು ಸದಾವಕಾಶ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಿ ಅವರೊಂದಿಗೆ ನಿಂತು. ತಮ್ಮ ವ್ಯಕ್ತಿತ್ವಕ್ಕೊಂದು ಘನತೆ ತಂದುಕೊಳ್ಳಬಹುದಾಗಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಯಾರಾದರೂ ಮುಖ್ಯಮಂತ್ರಿಯಾಗಲಿ! ಅಧಿಕಾರಕ್ಕಾಗಿ ಕಿತ್ತಾಡುವ ಬದಲು ಜವಬ್ದಾರಿಯಿಂದ ವರ್ತಿಸಿ ಬಹುಮತ ನೀಡಿರುವ ಮತದಾರರ ಗೌರವ ಕಾಪಾಡಿ. ಹೈಕಮ್ಯಾಂಡ್ ತೀರ್ಮಾನಕ್ಕೆ ಬದ್ದರಾಗಿ ಸಹಕರಿಸಿ. ಈ ಸರಳ ಬಹುಮತ ಭಾರತವೇ ಕರ್ನಾಟಕದತ್ತ ತಿರುಗುವಂತೆ ಮಾಡಿದೆ. ಅಧಿಕಾರದ ಹಗ್ಗಜಗ್ಗಾಟ ಮುಂದಿನ ದಿನಗಳ ಪ್ರಾಯಶ್ಚಿತ್ತಕ್ಕೆ ಕಾರಣವಾಗದಿರಲಿ.
-ಶ್ರೀನಿವಾಸಮೂರ್ತಿ ಎಲ್ ಗಂಗಾತನಯಸಿರಿ