Thursday, November 21, 2024
Google search engine
Homeಮುಖಪುಟನೋಟು ಬ್ಯಾನ್ ಗೆ ಆರು ವರ್ಷ - ಈಡೇರದ ಉದ್ದೇಶ

ನೋಟು ಬ್ಯಾನ್ ಗೆ ಆರು ವರ್ಷ – ಈಡೇರದ ಉದ್ದೇಶ

ನೋಟು ಬ್ಯಾನ್ ಮಾಡಿದ್ದಕ್ಕೆ ಇಂದಿಗೆ ಆರು ವರ್ಷ ಪೂರೈಸಿಸಿದೆ. ಆದರೂ ನೋಟು ಅಮಾನ್ಯೀಕರಣದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ನೋಟ್ ಬ್ಯಾನ್ ನಿಂದ ಕಪ್ಪುಹಣ ತಡೆಯಲು ಮತ್ತು ನಗದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶ ಈಡೇರಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ನವೆಂಬರ್ 8ರಂದು ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 1,000 ಮತ್ತು 500 ರೂಪಾಯಿಗಳ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು ಮತ್ತು ಈ ನಿರ್ಧಾರದ ಪ್ರಮುಖ ಉದ್ದೇಶವೆಂದರೆ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಮತ್ಉ ಭಯೋತ್ಪಾದಕ ನಿಧಿಯನ್ನು ನಿರ್ಮೂಲನೆ ಮಾಡುವುದು ಮತ್ತು ಕಪ್ಪು ಹಣವನ್ನು ತಡೆಯುವುದಕ್ಕೆ ಆಗಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

ರಿಸರ್ವ್ ಬ್ಯಾಂಕಿನ ಅಂಕಿಅಂಶಗಳ ಪ್ರಕಾರ ಅಕ್ಟೋಬರ್ 21ರಂದು ಸಾರ್ವಜನಿಕರೊಂದಿಗಿನ ಕರೆನ್ಸಿ ಹೊಸ ಗರಿಷ್ಠ 30.88 ಲಕ್ಷ ಕೋಟಿ ರೂಪಾಯಿಗೆ ಜಿಗಿದಿದೆ. ನೋಟು ಅಮಾನ್ಯೀಕರಣ ಕ್ರಮದ ಆರು ವರ್ಷಗಳ ನಂತರವೂ ನಗದು ಬಳಕೆ ಇನ್ನೂ ಗಣನೀಯವಾಗಿದೆ ಎಂದು ಸೂಚಿಸುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನಾ ವರದಿಯಲ್ಲಿ ಪಾವತಿ ವ್ಯವಸ್ಥೆಗಳಲ್ಲಿ ಕರೆನ್ಸಿ ಹರಿವಿನ ಪಾಲು 2015-16ರ ಹಣಕಾಸು ವರ್ಷದಲ್ಲಿ ಶೇ.88 ರಿಂದ 2021=22ರಲ್ಲಿ ಶೇ.20ಕ್ಕೆ ಇಳಿದಿದೆ ಮತ್ತು ಇದು ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪರಿಣಾಮ ಡಿಜಿಟಲ್ ವಹಿವಾಟಿನ ಪಾಲು 2015-16ರಲ್ಲಿ 11.26 ಶೇಕಡಾದಿಂದ 2021-22ರಲ್ಲಿ ಶೇ.80.4ಕ್ಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು 2026-27ರಲ್ಲಿ ಶೇ.88ಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಎಸ್.ಬಿ.ಐ ವರದಿ ಹೇಳಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮೋದಿ ಸರ್ಕಾರದ ನೋಟು ಅಮಾನ್ಯೀಖರಣದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೋಟು ಬ್ಯಾನ್ ನಿರ್ಧಾರವು ದೇಶವನ್ನು ಕಪ್ಪುಹಣದಿಂದ ಮುಕ್ತಗೊಳಿಸಲು ಭರವಸೆ ನೀಡಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಇದು ವ್ಯವಹಾರಗಳನ್ನು ನಾಶಪಡಿಸಿತು ಮತ್ತು ಉದ್ಯೋಗಗಳನ್ನು ಹಾಳುಮಾಡಿತು. ಮಾಸ್ಟರ್ ಸ್ಟ್ರೋಕ್ ನ 6 ವರ್ಷಗಳ ನಂತರ ಸಾರ್ವಜನಿಕವಾಗಿ ಲಭ್ಯವಿರುವ ನಗದು 2016 ಕ್ಕಿಂತ 72ರಷ್ಟು ಹೆಚ್ಚಾಗಿದೆ. ಆರ್ಥಿಕತೆಯ ಕುಸಿತಕ್ಕೆ ಕಾರಣವಾದ ಈ ಮಹಾಕಾವ್ಯದ ವೈಫಲನ್ಯವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular