Saturday, October 19, 2024
Google search engine
Homeಮುಖಪುಟಮುನಗೋಡು ಉಪಚುನಾವಣೆ - 5ನೇ ಸುತ್ತಿನಲ್ಲೂ ಮುನ್ನಡ ಕಾಯ್ದೆಕೊಂಡ ಟಿಆರ್.ಎಸ್.

ಮುನಗೋಡು ಉಪಚುನಾವಣೆ – 5ನೇ ಸುತ್ತಿನಲ್ಲೂ ಮುನ್ನಡ ಕಾಯ್ದೆಕೊಂಡ ಟಿಆರ್.ಎಸ್.

ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಐದನೇ ಸುತ್ತಿನ ಎಣಿಕೆ ಪೂರ್ಣಗೊಂಡಾಗ ಟಿಆರ್.ಎಸ್ ಬಿಜೆಪಿಗಿಂತ ಮುನ್ನಡೆ ಕಾಯ್ದುಕೊಂಡಿತ್ತು. ಐದನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಟಿಆರ್.ಎಸ್. 1500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು.

ಇವಿಎಂಗಳ ಮತ ಎಣಿಕೆ ಕಾರ್ಯ ವಿಳಂಬವಾಗುತ್ತಿದ್ದು ಇದಕ್ಕೆ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ನಾಲ್ಕನೇ ಸುತ್ತುಗಳ ನಂತರ ಟಿಆರ್.ಎಸ್ 26,443, ಬಿಜೆಪಿ 25,728, ಕಾಂಗ್ರೆಸ್-7380 ಮತಗಳನ್ನು ಪಡೆದಿದ್ದವು.

ಐದನೇ ಸುತ್ತಿನಲ್ಲಿ ಟಿಆರ್.ಎಸ್. 32,405 ಮತಗಳು ಮತ್ತು ಬಿಜೆಪಿ 30,975 ಮತಗಳನ್ನು ಪಡೆದುಕೊಂಡಿದ್ದವು. ಐದನೇ ಸುತ್ತಿನಲ್ಲೂ ಟಿಆರ್.ಎಸ್ 1500 ಮತಗಳ ಮುನ್ನಡೆ ಕಾಯ್ದುಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular