ಮುಂದಿನ ದಿನಗಳಲ್ಲಿ ಮುಂಬೈಗೆ ಹಿಂತಿರುಗಿದರೆ ಕಾಂಗ್ರೆಸ್ ಮತ್ತು ಎನ್.ಸಿ.ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಮರುಚಿಂತನೆ ನಡೆಸಲಾಗುವುದು ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ನೀವು ಶಿವಸೇನೆ ತೊರೆಯುತ್ತಿಲ್ಲ ಎಂದು ಹೇಳುತ್ತಿದ್ದರೆ ನಿಮ್ಮ ಸಮಸ್ಯೆ ಸರ್ಕಾರದ್ದಾಗಿದ್ದರೆ ನಾವು ಅದರಿಂದ ಹೊರಬರಲು ಸಿದ್ದರಿದ್ದೇವೆ. ಮೊದಲು ಮರಳಿ ಬರುವ ಧೈರ್ಯವನ್ನು ತೋರಿಸಿ ಮತ್ತು ಉದ್ದವ್ ಠಾಕ್ರೆಗೆ ನಿಮ್ಮ ಬೇಡಿಕೆಗಳನ್ನು ಮುಂದಿಡಿ, ನೀವು 24 ಗಂಟೆಗಳ ಒಳಗೆ ಹಿಂತಿರುಗಿದರೆ ಅದನ್ನು ಪರಿಗಣಿಸಲಾಗುತ್ತದೆ ಎಂದು ರಾವುತ್ ತಿಳಿಸಿದ್ದಾರೆ.
ಈ ನಡುವೆ ಏಕನಾಥ್ ಶಿಂಧೆ ಪಾಳಯಕ್ಕೆ ಸೇರಿದ ಶಾಸಕ ಸಂಜಯ್ ಶಿರ್ಸಾತ್ ಬರೆದಿರುವ ಪತ್ರದಲ್ಲಿ ಸಿಎಂ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಶಿವಸೇನೆ ನಾಯಕರಿಗೆ ಅಯೋಧ್ಯೆಗೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ ಎಂದರು.
ನಾವು ಸಿಎಂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ ನಮ್ಮ ನಿಜವಾದ ವಿರೋಧ ಪಕ್ಷಗಳಾದ ಕಾಂಗ್ರೆಸ್್ ಮತ್ತು ಎನ್.ಸಿ.ಪಿ ಮುಖಂಡರನ್ನು ಭೇಟಿ ಮಾಡಲು ಅವಕಾಶಗಳನ್ನು ಪಡೆಯುತ್ತಿದ್ದರು ಮತ್ತು ಅವರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವರಿಗೆ ಹಣವನ್ನು ಸಹ ನೀಡಲಾಯಿತು ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಶಿವಸೇನೆಯ ಇನ್ನೂ ಮೂವರು ಶಾಸಕರು ಬುಧವಾರ ರಾತ್ರಿಯಿಂದ ಅಸ್ಸಾಂನ ಗುವಾಹಟಿಯಲ್ಲಿ ಏಕನಾಥ್ ಶಿಂಧೆ ಅವರ ಪಾಳೆಯಕ್ಕೆ ಸೇರಿದ್ದಾರೆ. ಗುರುವಾರ ಬೆಳಗ್ಗೆ ಶಿವಸೇನಾ ಶಾಸಕರಾದ ದೀಪಕ್ ಕೇಸರ್ಕರ್, ಸದಾ ವಾರ್ವಾಂಕರ್ ಮತ್ತು ಅಶಿಶ್ ಜೈಸ್ವಾಲ್ ಅವರು ಗುವಾಹಟಿಯಲ್ಲಿ ರಾಡಿಸಸ್ ಬ್ಲೂ ತಲುಪಿದ್ದಾರೆ.