ಮಹಾರಾಷ್ಟ್ರ ಸಚಿವ ಏಕನಾಥ್ ಸಿಂಧೆ ನೇತೃತ್ವದಲ್ಲಿ 21 ಶಿವಸೇನಾ ಶಾಸಕರು ಗುಜರಾತ್ ನ ಸೂರತ್ ನಗರದ ಹೋಟೆಲ್ ವೊಂದರಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದ ಆರು ಸ್ಥಾನಗಳಲ್ಲಿ ಒಂದನ್ನು ಕಳೆದುಕೊಳ್ಳುವ ಮೂಲಕ ಬಿಜೆಪಿ ಹಿನ್ನಡೆ ಅನುಭವಿಸಿ ಒಂದು ದಿನದ ನಂತರ ಈ ಬೆಳವಣಿಗೆಗಳು ನಡೆದಿವೆ.
ತಮ್ಮ ನಾಯಕತ್ವದ ಬಗ್ಗೆ ಅತೃಪ್ತಿ ತೋರುತ್ತಿರುವ ಶಾಸಕರು ಜೂನ್ 20ರಂದು ರಾತ್ರಿ ಸೂರತ್ ಗೆ ಆಗಮಿಸಿ ಅಲ್ಲಿನ ಲೆ ಮೆರಿಡಿಯನ್ ಹೋಟೆಲ್ ನಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
10 ಸ್ಥಾನಗಳಿಗೆ ನಡೆದ ಎಂಎಲ್.ಸಿ ಚುನಾವಣೆಯಲ್ಲಿ ಬಿಜೆಪಿ ತಾನು ಸ್ಪರ್ಧಿಸಿದ್ದ ಐದೂ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶಿವಸೇನೆ ಮತ್ತು ಎನ್.ಸಿ.ಪಿ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಅದರ ಇಬ್ಬರು ನಾಮನಿರ್ದೇಶಿತರಲ್ಲಿ ಒಬ್ಬರು ದಲಿತ ನಾಯಕ ಚಂದ್ರಕಾಂತ್ ಹಂದೋರೆ ಸೋತಿದ್ದರಿಂದ ಕಾಂಗ್ರೆಸ್ ಆಘಾತ ಅನುಭವಿಸಿದೆ.
ಆದಾಗ್ಯೂ ಪಕ್ಷದ ಹಿರಿಯ ನಾಯಕ ಸಂಜಯ್ ರಾವುತ್ ಅವರು ಗುಜರಾತ್ ನಲ್ಲಿ ಇರುವ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ಹೇಳಿದ್ದಾರೆ.