ರಸಗೊಬ್ಬರ ಬೆಲೆ ಏರಿಕೆ ಸೇರಿ ಹಲವು ಸಮಸ್ಯೆಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕು ಕೇಂದ್ರದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು ಮುಂಗಾರು ಸಂದರ್ಭಧಲ್ಲಿ ರಸಗೊಬ್ಬರ ಕೊರತೆ ಕಾಳಸಂತೆಯಲ್ಲಿ ಮಾರಾಟ ಹಾಗೂ ರಸಗೊಬಬರ ಕಲಬೆರಕೆ ರೈತರನ್ನು ಕಂಗಾಲಾಗಿಸಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ತಾವೇ ರೈತರನ್ನು ಖದ್ದಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ರೈತರು ರಸಗೊಬ್ಬರ ವಿಚಾರವಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ರೈತರ ಜತೆ ಸಂವಾದ ಮುಗಿದ ಬಳಿಕ ತಾಲ್ಲೂಕು ಎಪಿೆಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೂರಿಯಾ ಮತ್ತು ಇತರೆ ರಸಗೊಬ್ಬರ ಕಳೆದ ವರ್ಷದ ಬೆಲೆ ಹಾಗೂ ಪ್ರಸಕ್ತ ವರ್ಷದಲ್ಲಿನ ಬೆಲೆಯ ಮಾಹಿತಿ ಪಡೆದರು.
ಬಳಿಕ ಬೀದಿಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಮಾಗಡಿಯ ಜನ ಬೆಂಗಳೂರಿಗೆ ತರಕಾರಿ ಹಾಲು ರೇಷ್ಮೆ ನೀಡುತ್ತಿದ್ದಾರೆ ಇಲ್ಲಿನ ರೈತರು ಒಣ ಬೇಸಾಯ ಮಾಡುತ್ತಿದ್ದಾರೆ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರೈತರಿಗೆ ವೇತನ, ಬಡ್ತಿ, ಪಿಂಚಣಿ ಹಾಗೂ ಲಂಚ ಯಾವುದೂ ಇಲ್ಲ. ಕಾಳಸಂತೆ ಹೆಚ್ಚಾಗಿದ್ದು ಇಲಾಖೆ ರೈತರ ಬಗ್ಗೆ ಗಮನ ಹರಿಸಬೇಕು. ರೈತರಿಗೆ ರಸಗೊಬ್ಬರ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.
ಮೋದಿ ಸರ್ಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಭರವಸೆ ನೀಡಿತು. ಅಂದರೆ ಅವರು ಖರೀದಿ ಮಾಡುವ ವಸ್ತುಗಳ ಬೆಲೆ ಅರ್ಧಕ್ಕೆ ಇಳಿಯಬೇಕು. ಅವರ ಬೆಳೆಗಳಿಗೆ ದುಪ್ಪಟ್ಟು ದರ ಸಿಗಬೇಕು. ಆದರು ಅದು ಸಾಧ್ಯವಾಗಿಲ್ಲ. ರೈತರ ಪ್ರತಿ ವಸ್ತುವಿನ ಬೆಲೆ ಗಗನಕ್ಕೇರುತ್ತಿದೆ. ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.


