Friday, October 18, 2024
Google search engine
Homeಮುಖಪುಟಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ರಾಜ್ ವೋರಾ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಮುಖಾಮುಖಿ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಎರಡು ಎಕೆ-47 ರೈಫಲ್ ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೋಮವಾರ ಆರಂಭವಾದ ಎನ್ ಕೌಂಟರ್ ಮಂಗಳವಾರ ಇಬ್ಬರು ಉಗ್ರರ ಹತ್ಯೆಯೊಂದಿಗೆ ಕೊನೆಗೊಂಡಿದೆ.

ಇಬ್ಬರು ಸ್ಥಳೀಯ ಉಗ್ರರು ಟ್ರಾಲ್ ನ ಶಾಹಿದ್ ರಾಧರ್ ಮತ್ತು ಶೋಪಿಯಾನ್ ನ ಉಮರ್ ಯೂಸೂಫ್ ಎಂದು ಗುರುತಿಸಲಾಗಿದೆ.

ಇತರ ಭಯೋತ್ಪಾದಕ ಅಪರಾಧಗಳ ಜೊತೆಗೆ ಶಾಹಿದ್ ಅರಿಪಾಲ್ ನ ಮಹಿಳೆ ಶಕೀಲಾ ಮತ್ತು ಟ್ರಾಲ್ ನ ಲುರ್ಗಾಮ್ ನ ಸರ್ಕಾರಿ ಉದ್ಯೋಗಿ ಜಾವಿದ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular