ಪತ್ನಿಯೊಂದಿಗಿನ ಕಲಹಕ್ಕಾಗಿ ಬೇಸತ್ತ ಪತಿಯೊಬ್ಬ ಸಿಲಿಂಡರ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲ್ಲೂಕು ಕೋರಾ ಪೊಲೀಸ್ ಠಾಣೆಯ ಲಿಂಗನಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಲಿಂಗನಹಳ್ಳಿ ನಿವಾಸಿ ಗೋವಿಂದರಾಜು ಎಂದು ಗುರುತಿಸಲಾಗಿದೆ.
ಬೆಂಕಿಹೊತ್ತಿಕೊಂಡಿದ್ದ ಗೋವಿಂದರಾಜು ಅವರನ್ನು ರಕ್ಷಣೆ ಮಾಡಲು ಯತ್ನಿಸಿದ ಇಬ್ಬರು ಪೊಲೀಸರಿಗೂ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಪೊಲೀಸರನ್ನು ಗವಿರಂಗಪ್ಪ ಮತ್ತು 112ರ ಚಾಲಕ ಗುಣಗಾನಪ್ಪ ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಪತಿ-ಪತ್ನಿಯ ನಡುವೆ ಕಲಹ ನಡೆದಿತ್ತು. ಈ ಹಿನ್ನೆಲೆಯಲ್ಲಿ 112ಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹಾಗಾಗಿ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಬಾಗಿಲನ್ನು ತೆರೆದು ಬೆಂಕಿ ಹೊತ್ತಿಕೊಂಡಿದ್ದ ಗೋವಿಂದರಾಜು ನನ್ನು ಪಾರು ಮಾಡಲು ಹೋಗಿ ಪೊಲೀಸರಿಗೂ ಬೆಂಕಿ ತಗುಲಿದೆ ಎಂದು ಹೇಳಲಾಗಿದೆ.
ಬೆಂಕಿಯಿಂದ ಗಾಯಗೊಂಡಿದ್ದ ಪೊಲೀಸ್ ಪೇದೆಯನ್ನು ಹೆಚ್ಚಿನ ಚಿಕಿತ್ಸೆಗಾಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.