Monday, December 23, 2024
Google search engine
Homeಮುಖಪುಟಯುವಕರಲ್ಲಿ ಚೈತನ್ಯ ಮೂಡಿಸಿದ ರಾಜೀವ್ ಗಾಂಧಿ ಮಹಾನಾಯಕ - ಮಲ್ಲಿಕಾರ್ಜುನ ಖರ್ಗೆ

ಯುವಕರಲ್ಲಿ ಚೈತನ್ಯ ಮೂಡಿಸಿದ ರಾಜೀವ್ ಗಾಂಧಿ ಮಹಾನಾಯಕ – ಮಲ್ಲಿಕಾರ್ಜುನ ಖರ್ಗೆ

ರಾಜೀವ್ ಗಾಂಧಿ ಯುವಕರಾಗಿ ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್ ನಾಯಕ. ಅವರು ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದಾಗ ವಿಶ್ವದ ಅನೇಕ ನಾಯಕರು ದೇಶಗಳು ಆಕರ್ಷಿತರಾಗಿ ನಮ್ಮ ವಿದೇಶ ನೀತಿಗೆ ಅಲಿಪ್ತ ನೀತಿಗೆ ಬದ್ದವಾಗಿ ರಷ್ಯಾ ಅಥವಾ ಅಮೆರಿಕ ಪರವಾಗಿ ನಿಲ್ಲಬಾರದು ಎಂಬ ಧೋರಣೆಯನ್ನು ಮುಂದುವರಿಸಿದರು ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ ನೀತಿಯನ್ನು ಉಕ್ರೇನ್ ರಷ್ಯಾ ಯುದ್ದದಲ್ಲಿ ಅನುಸರಿಸಲಾಯಿತು. ಆದರೆ ಇವರು ತಮ್ಮ ನೀತಿ ಎಂದು ಹೇಳಿಕೊಳ್ಳುತ್ತಾರೆ ಎಂದರು.

ಬಿಜೆಪಿಯವರಿಗೆ ಎರಡು ಗುರಿ ಇವೆ. ಸಾರ್ವಜನಿಕ ವಲಯ ಮಾರಿದರೆ ಬಡವರಿಗೆ ಕೆಲಸ ಹಾಗೂ ಮೀಸಲಾತಿ ಸಿಗುವುದಿಲ್ಲ. ಹೀಗಾಗಿ ಬಡವರ 60ರಷ್ಟು ಮೀಸಲಾತಿ ದಲಿತರು, ಹಿಂದುಳಿದವರು ಹಾಗೂ ಆರ್ಥಿಕ ಹಿಂದುಳಿದವರಿಗೆ ಇದೆ. ದೇಶದ 26 ಲಕ್ಷ ಉದ್ಯೋಗಗಳು ತುಂಬಿಲ್ಲ. ಇದರಲ್ಲಿ ಶೇ.60ರಷ್ಟು ಬಡವರಿಗೆ ನೀಡಬೇಕಲ್ಲ. ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದರು.

ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮ ಬದಲಾವಣೆ, ಸಮಾಜದಲ್ಲಿ ಬೆಂಕಿ ಹಚ್ಚುವುದು, ಸೂಲಿಬೆಲೆ ಹೇಳಿದ ಎಂಬ ಕಾರಣಕ್ಕೆ ಭಗತ್ ಸಿಂಗ್ ಅವರ ಪಠ್ಯವನ್ನು ತೆಗೆಯುತ್ತಿದ್ದೀರಿ. ಹೆಡಗೇವಾರ್ ಅವರ ನಡವಳಿಕೆಯಿಂದ ದೇಶ ಇಬ್ಭಾಗವಾಗುತ್ತಿರುವಾಗ ಅವರ ವಿಚಾರ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ನಾರಾಯಣಗುರು ಅವರಂತಹ ವ್ಯಕ್ತಿಗಳ ಮಾಹಿತಿ ಮಕ್ಕಳಿಗೆ ನೀಡುತ್ತಿಲ್ಲ ಎಂದು ಹೇಳಿದರು.

ಹೆಡಗೇವಾರ್ ಅವರ ಪಠ್ಯವನ್ನು ಯಾಕೆ ಸೇರಿಸಬೇಕು. ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳೇನು? 1929ರಲ್ಲಿ ಹುಟ್ಟಿದ ಆರ್.ಎಸ್.ಎಸ್ ಅನ್ನು ಕೇವಲ 4 ಮಂದಿ ನೋಂದಣಿ ಮಾಡಿದ್ದರು. 5 ವರ್ಷಗಳ ನಂತರ ಪದಾಧಿಕಾರಿಗಳು ಮಂಡಳಿಯಲ್ಲಿ ಕೇವಲ 90 ಜನ ಇದ್ದರು. ಅಂತಹವರು ಇಂದು ಬೆಳೆದು ನಿಂತು ಬಡವರನ್ನು, ಸಂವಿಧಾನ, ಪ್ರಜಾಪ್ರಭುತ್ವ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಸಾವರ್ಕರ್ ಅವರು, ಭಾಗವತ್ ಅವರು ಗಾಂಧಿ ಅವರ ಜತೆಯಲ್ಲಿ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗವಹಿಸುತ್ತೀರಿ. ಬ್ರಿಟೀಷರ ಕೆಳಗೆ ಸರರ್ಕಾರಿ ನೌಕರಿ ಪಡೆಯಿರಿ ಹಣ ಸಂಪಾದಿಸಿ ಎಂದು ಜನರಿಗೆ ಹೇಳುತ್ತಿದ್ದರು. ಇಂತಹವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ದೇಶಕ್ಕಾಗಿ ಹೋರಾಡಿದವರ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜನರಿಗೆ ಜಾಗೃತಿ ಮಾಢಬೇಕು. ನಾವು ಮನೆ ಮನೆ ಪ್ರಚಾರ ಹಳ್ಳಿಹಳ್ಳಿಗೆ ಪ್ರಚಾರ ಮಾಡಬೇಕು. ನಮ್ಮ ನಾಯಕರು ಯಾರೇ ಅಭಿಪ್ರಾಯ ವ್ಯಕ್ತಪಡಿಸಿದರೂ ನೀವು ಅದನ್ನು ಹಂಚಿಕೊಳ್ಳಬೇಕು. ಪಕ್ಷದಲ್ಲಿ ನಮ್ಮ ಪರವಾಗಿರುವ ಅಲ್ಪಸಂಖ್ಯಾತರಿಗೆ ಅನ್ಯಾಯ ಆದರೆ ನಾವು ಮಾತನಾಡಬೇಕು. ಇನ್ನು ದುರ್ಬಲರ ಮೇಲೆ ಆಗುವ ದಬ್ಬಾಳಿಕೆ ವಿರುದ್ಧ ದನಿ ಎತ್ತಬೇಕು. ಆಗ ಮಾತ್ರ ನಮಗೆ ಬೆಲೆ ಹಾಗೂ ಶಕ್ತಿ ಬರುತ್ತದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular