Friday, November 22, 2024
Google search engine
Homeಮುಖಪುಟಎಡಪಂಥೀಯ ನಾಯಕ, ಬಾಗೇಪಲ್ಲಿಯ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ

ಎಡಪಂಥೀಯ ನಾಯಕ, ಬಾಗೇಪಲ್ಲಿಯ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ನಾಯಕ ಜಿ.ವಿ.ಶ್ರೀರಾಮರೆಡ್ಡಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

1999 ಮತ್ತು 2004 ಈ ಎರಡೂ ಅವಧಿಯಲ್ಲಿ ಬಾಗೇಪಲ್ಲಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಸಂಸದೀಯ ಪಟು ಎಂಬ ಖ್ಯಾತಿ ಪಡೆದಿದ್ದರು.

ಸಿಪಿಎಂ ಪಕ್ಷದ ಜಿ.ವಿ.ಶ್ರೀರಾಮರೆಡ್ಡಿ, ಸಂಯುಕ್ತ ಜನತಾ ದಳದ ಜೆ.ಸಿ.ಮಾಧುಸ್ವಾಮಿ, ಜನತಾ ದಳದ ಜಯಪ್ರಕಾಶ್ ಹೆಗ್ಗೆಡೆ ಮತ್ತು ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಹಲವು ಗಂಭೀರ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿ ಸದನದ ಗಮನ ಸೆಳೆಯುತ್ತಿದ್ದರು.

ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದರು. ಅವರು ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಹಲವು ಹೋರಾಟಗಳನ್ನು ಸಂಯೋಜಿಸಿ ಯಶಸ್ವಿಯಾಗಿದ್ದರು. ಉಡುಪಿ ಚಲೋ ಕಾರ್ಯಕ್ರಮವನ್ನು ಸಂಘಟಿಸಿದ್ದರು. ವಿದ್ಯಾರ್ಥಿ, ಯುವಜನ ಚಳವಳಿಗಳಿಗೆ, ಕಾರ್ಮಿಕ ಚಳವಳಿಗಳನ್ನು ಮುನ್ನಡೆಸಿದ್ದರು.

ಸಂತಾಪಗಳು:

ಅತ್ಯಂತ ನೋವಿನ ದಿನ.. ಕಾಮ್ರೇಡ್ ಜಿ.ವಿ.ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ. ಕರ್ನಾಟಕದ ರಾಜಕಾರಣ, ಸಮತಾವಾದಿ ಚಳವಳಿಯಲ್ಲಿ ನಿಮ್ಮ ಪಾತ್ರವನ್ನು ಯಾರಿಂದಲೂ ಅಳಿಸಲಾಗದು. ನನ್ನ ನೆನಪುಗಳಲ್ಲಿ ಸದಾ ಜೀವಂತ ಇರುತ್ತೀರಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಪಳ್ಳ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮ್ರೇಡ್ ಜಿ.ವಿ.ಎಸ್ ನೀರಾವರಿ ಹೋರಾಟಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಬಯಲುಸೀಮೆಯಲ್ಲಿ ನೀರಾವರಿ ಅಭಿವೃದ್ಧಿಯಾಗಬೇಕು ಎಂದು ಹೋರಾಟ ನಡೆಸಿದ್ದರು. ಸಿಪಿಎಂ ಪಕ್ಷದ ಬೆಳವಣಿಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ರಾಜ್ಯದ ವಿದ್ಯಾರ್ಥಿ ಮತ್ತು ಯುವಜನ ಚಳವಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಮುಖಂಡರ ಮೇಲೆ ಎಲ್ಲಿಯೇ ದಾಳಿಯಾದರೂ ಖಂಡಿಸುತ್ತಿದ್ದರು. ರಾಜಿರಹಿತ ಹೋರಾಟ ನಡೆಸಿಕೊಂಡು ಬಂದಿದ್ದರು ಎಂದು ವಿದ್ಯಾರ್ಥಿ ನಾಯಕ ಈ.ಶಿವಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular