ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಎಲ್ಲಾ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು ಎಂದು ಸಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಹೆಚೂರಿ ಒತ್ತಾಯಿಸಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಆರಂಭವಾದ ಸಿಪಿಎಂ ಪಕ್ಷ 23ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಯೆಚೂರಿ ಪರ್ಯಾಯ ಕಾರ್ಯಕ್ರಮದ ಆಧಾರದ ಮೇಲೆ ಕೋಮುವಾದದ ವಿರುದ್ಧ ಎಲ್ಲಾ ಜಾತ್ಯತೀತ ಶಕ್ತಿಗಳು ವಿಶಾಲವಾದ ರಂಗವನ್ನು ರಚಿಸಬೇಕು ಎಂದು ಹೇಳಿದರು.
ಈ ದಿಕ್ಕಿನಲ್ಲಿ ನಾವು ಹೇಗೆ ಮುಂದುವರೆಯುತ್ತೇವೆ ಎಂಬುದರ ಕುರಿತು ಪಕ್ಷದ ಕಾಂಗ್ರೆಸ್ ಚರ್ಚಿಸುತ್ತದೆ. ಬಿಜೆಪಿಯನ್ನು ಪ್ರತ್ಯೇಕಿಸಿ ಸೋಲಿಸಲು ಎಲ್ಲಾ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಬೇಕು ಎಂದು ಸಿಪಿಎಂ ಮನವಿ ಮಾಡುತ್ತದೆ. ಜಾತ್ಯತೀತತೆ ಸಾರುವ ಎಲ್ಲಾ ರಾಜಕೀಯ ಪಕ್ಷಗಳು ಈ ದೇಶಭಕ್ತಿಯ ಕರ್ತವ್ಯವನ್ನು ನಿರ್ವಹಿಸಲು ಮುಂದಾಗಬೇಕು ಎಂದರು.
ಕಾಂಗ್ರೆಸ್ ಪಕ್ಷವು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಭಾರತೀಯ ಗಣರಾಜ್ಯದ ಜಾತ್ಯತೀತ, ಪ್ರಜಾಸತ್ತಾತ್ಮಕ ಸ್ವರೂಪವನ್ನು ಕಾಪಾಡಲು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಬೇಕು ಎಂದು ಯೆಚೂರಿ ಹೇಳಿದರು.
ಫಲಿತಾಂಶಗಳು ಎಲ್ಲರಿಗೂ ನೋಡಲು ಲಭ್ಯವಿವೆ ಮತ್ತು ಇಂದು ಪ್ರಪಂಚವು ಕೇರಳದ ಉನ್ನತ ಶ್ರೇಣಿಯ ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ಶ್ಲಾಘಿಸುತ್ತಿದೆ. ಈ ಸಾಧನೆ ಜಾತ್ಯತೀತತೆಯನ್ನು ಎತ್ತಿಹಿಡಿಯುವ ಸಮಾನತೆಯನ್ನು ಗೌರವಿಸುವ ಮತ್ತು ಜನಪರ ನೀತಿಯ ಪರ್ಯಾಯದ ಈ ತತ್ವಗಳ ಆಧಾರದ ಮೇಲೆ ಇದೆ ಎಂದು ಒತ್ತಿಹೇಳಿದರು.