ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು ನರಹಳ್ಳಿ ಬಾಲಸುಬ್ರಹ್ಮಣ್ಯಂ, ಎಚ್.ಟಿ.ಪೋತೆ, ತುಮಕೂರು ಜಿಲ್ಲೆಯ ಸಿದ್ದಲಿಂಗಯ್ಯ ಹೊಲತಾಳು ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ.
ಕಾರುಣ್ಯದ ಮೋಹಕ ನವಿಲುಗಳೆ – ಆರನಕಟ್ಟಿ ರಂಗನಾಥ್
ಗಾಯಗೊಂಡವರಿಗೆ – ಮಂಜುಳಾ ಹಿರೇಮಠ
ಬಯಲೆಂಬೊ ಬಯಲು – ಎಚ್.ಟಿ.ಪೋತೆ
ಬಂಡಲ್ ಕತೆಗಳು – ಎಸ್.ಸುರೇಂದ್ರನಾಥ್
ಆರೋಹಿ – ಮಂಗಳ ಟಿ.ಎಸ್.
ನಿದ್ರಾಂಗನೆಯ ನೆಳವಿನಲ್ಲಿ – ಎನ್.ರಾಮನಾಥ್
ನಕ್ಷತ್ರಗಳ ಸುಟ್ಟ ನಾಡಿನಲ್ಲಿ – ಭಾರತಿ ಬಿ.ವಿ.
ಗ್ರಾಮಸ್ವರಾಜ್ಯ ಸಾಕಾರಗೊಳಿಸಿದ – ಕೃಷ್ಣಕೊಲ್ಹಾರ ಕುಲಕರ್ಣಿ
ಹೈದರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ – ಬಸವರಾಜ ಸಬರದ
ಲಿಂಗಣ್ಣ ಕವಿಯ ವರರಮ್ಯ ರತ್ನಾಕರ – ಕೆ.ರವೀಂದ್ರನಾಥ
ಮತ್ತೆ ಹೊಸಗೆಳೆಯರು – ವೈ.ಜಿ.ಭಗವತಿ
ಆಧ್ಯಾತ್ಮಕ ಆರೋಗ್ಯ – ಎಸ್.ಪಿ.ಯೋಗಣ್ಣ
ಗಾಂಧೀಯ ಅರ್ಥಶಾಸ್ತ್ರ – ಎಂ.ಎಂ.ಗುಪ್ತ
ಮ್ಯಾಸಬೇಡರ ಮೌಖಿಕ ಕಥನಗಳು – ಪಿ.ತಿಪ್ಪೇಸ್ವಾಮಿ ಚಳ್ಳಕೆರೆ
ದೈವಿಕ ಹೂವಿನ ಸುಗಂಧ – ಕೇಶವ ಮಳಗಿ
ಶಿವಂಡೆ ಕೆಡುಂತಡಿ – ಸುಧಾಕರನ್ ರಾಮಂತಳಿ
ಪದ ಸೋಪಾನ – ನರಹಳ್ಳಿ ಬಾಲಸುಬ್ರಹ್ಮಣ್ಯ
ಸುವರ್ಣಮುಖಿ – ಸಿದ್ದಗಂಗಯ್ಯ ಹೊಲತಾಳು
ಭಾರತದ ರಾಷ್ಟ್ರಧ್ವಜ ವಿಕಾಸ ಹಾಗೂ ಸಂಹಿತೆ – ಎಸ್.ಬಿ.ಬಸೆಟ್ಟಿ ಅವರಿಗೆ ಪ್ರಶಸ್ತಿಗಳು ಲಭಿಸಿವೆ.
ತುಮಕೂರಿನ ಸಿದ್ದಗಂಗಯ್ಯ ಹೊಲತಾಳ್ ಮತ್ತು ಚಿತ್ರದುರ್ಗದ ಅರನಕಟ್ಟೆ ರಂಗನಾಥ್ ಗೆ ಅಭಿನಂದನೆಗಳು
ನನ್ನ ಆತ್ಮೀಯರಿಬ್ಬರಿಗೆ ಈ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ಅಭಿನಂದನೆಗಳು..ವಿಶೇಷ ಎಂದರೆ ಚಿತ್ರದುರ್ಗದಲ್ಲಿ ಆರನಕಟ್ಟೆ ರಂಗನಾಥರ “ಕಾರುಣ್ಯ ಮೋಹಕ ನವಿಲುಗಳು” ಮತ್ತು ತುಮಕೂರಿನಲ್ಲಿ ಸಿದ್ದಗಂಗಯ್ಯ ಹೊಲತಾಳರ “ಸುವರ್ಣಮುಖಿ” ಈ ಎರಡು ಕೃತಿಗಳ ಬಿಡುಗಡೆಯಲ್ಲಿ ಕೃತಿ ಕುರಿತು ಮಾತನಾಡಿದ್ದೆ.
ಕಾರುಣ್ಯ ಮೋಹಕ ನವಿಲುಗಳು ಕಾವ್ಯದ ಹೊಸ ಸಾಧ್ಯತೆಗಳನ್ನು ನಮ್ಮ ಮುಂದಿರಿಸಿದೆ. ಮೊದಲ ಸಂಕಲನದಲ್ಲಿಯೇ ಸಾಕಷ್ಟು ಭರವಸೆಗಳನ್ನು ಹುಟ್ಟಿಸಿದ ಸಂಕಲನವಿದು. ಪರಂಪರೆಯನ್ನು ಎದುರುಗೊಳ್ಳುವ ಬಗೆಯೂ ಹೊಸತನದ್ದೆ. ಹೊಲತಾಳರ “ಸುವರ್ಣಮುಖಿ” ವಿಶಿಷ್ಟ ನೆಲೆಯ ಕೃತಿ. ಇದೊಂದು ಕಾಲುದಾರಿ ಕಥನ. ಸಿದ್ದರಬೆಟ್ಟದ ಸುತ್ತ ನಡೆದಾಡುವ ಕಥನವಿದು. ಕೃಷಿ, ಜಾನಪದ, ಸಂಸ್ಕೃತಿ, ನಡವಳಿಕೆ ಎಲ್ಲವುಗಳು ಈ ಕೃತಿಯನ್ನು ವಿಭಿನ್ನವಾಗಿಸಿವೆ.
ಡಾ.ರವಿಕುಮಾರ್ ನೀಹಾ