ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳನ್ನು ಮಾರ್ಚ್ 31ರಂದು ಪ್ರಕಟಿಸಿದ್ದು 10 ಪುಸ್ತಕಗಳಿಗೆ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಕಾವ್ಯ (ಹಸ್ತಪ್ರತಿ ಪ್ರಕಾರ)ದಲ್ಲಿ ಪದ್ಮಜಾ ಜಯತೀರ್ಥ ಅವರ ಬೆಳದಿಂಗಳ ಚೆಲುವು ಕೃತಿಗೆ ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕೆ ಭಾಜನವಾಗಿದೆ. ಕಾದಂಬರಿ ಪ್ರಕಾರದಲ್ಲಿ ಎಂ.ಎಸ್.ವೇದಾ ಅವರ ದೊಡ್ಡತಾಯಿ ಕೃತಿಗೆ ಚದುರಂಗ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಲಲಿತ ಪ್ರಬಂಧ ಪ್ರಕಾರದಲ್ಲಿ ಆರತಿ ಘಟಿಕಾರ್ ಅವರ ವಠಾರ ಮೀಮಾಂಸೆ ಕೃತಿಗೆ ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನ ಲಭಿಸಿದೆ.
ಜೀವನ ಚರಿತ್ರೆ ಪ್ರಕಾರದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಅವರ ಕಾಗೆ ಮುಟ್ಟಿದ ನೀರು ಕೃತಿಗೆ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ದೊರೆತಿದೆ. ಸಾಹಿತ್ಯ ವಿಮರ್ಶೆ ಪ್ರಕಾರದಲ್ಲಿ ತಾರಿಣಿ ಶುಭದಾಯಿನಿ ಅವರ ಕುವೆಂಪು ಸ್ತ್ರೀ ಸಂವೇದನೆ ಕೃತಿಗೆ ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ಲಭಿಸಿದೆ. ಅನುವಾದ-1 ಪ್ರಕಾರದಲ್ಲಿ ಪದ್ಮರಾಜ ದಂಡವತಿ ಅವರ ಸೀತಾ ಕೃತಿಗೆ ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ ದೊರೆತಿದೆ.
ಲೇಖಕರ ಮೊದಲ ಸ್ವತಂತ್ರ ಕೃತಿ ಪ್ರಕಾರದಲ್ಲಿ ಕುಶ್ವಂತ್ ಕೋಳೆಬೈಲು ಅವರ ಕೂರ್ಗ್ ರೆಜಿಮೆಂಟ್ ಪುಸ್ತಕಕ್ಕೆ ಮಧುರಚೆನ್ನ ದತ್ತಿನಿಧಿ ಬಹುಮಾನ, ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಪ್ರಕಾರದಲ್ಲಿ ಕೆ.ಎಂ.ಶ್ರೀನಿವಾಸಗೌಡ ಮತ್ತು ಜಿ.ಕೆ.ಶ್ರೀಕಂಠಮೂರ್ತಿ ಕೃತಿ ದಿ ಬ್ರೈಡ್ ಇನ್ ದಿ ರೈನಿ ಮೌಂಟೇನ್ ಕೃತಿಗೆ ಅಮೆರಿಕನ್ನಡ ದತ್ತಿನಿಧಿ ಬಹುಮಾನ ಲಭ್ಯವಾಗಿದೆ.
ವೈಚಾರಿಕ/ಅಂಕಣ ಬರಹದಲ್ಲಿ ನಡಹಳ್ಳಿ ವಸಂತ ಅವರ ಸಮರಸದ ದಾಂಪತ್ಯ ಕೃತಿಗೆ ಬಿ.ವಿ.ವೀರಭದ್ರಪ್ಪ ದತ್ತಿನಿಧಿ ಪ್ರಶಸ್ತಿಗೆ ಭಾಜನವಾಗಿದೆ. ದಾಸ ಸಾಹಿತ್ಯದಲ್ಲಿ ಶ್ರೀನಿವಾಸ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ ಕೃತಿಗೆ ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರು ಪ್ರಶಸ್ತಿ ಲಭಿಸಿದೆ.