Friday, October 18, 2024
Google search engine
Homeಮುಖಪುಟಮಕ್ಕಳ ಶಿಕ್ಷಣದ ಕುರಿತು ಸರ್ಕಾರ ಗಮನಹರಿಸಲಿ - ಡಿ.ಕೆ.ಶಿವಕುಮಾರ್

ಮಕ್ಕಳ ಶಿಕ್ಷಣದ ಕುರಿತು ಸರ್ಕಾರ ಗಮನಹರಿಸಲಿ – ಡಿ.ಕೆ.ಶಿವಕುಮಾರ್

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಕ್ಕಳು ತಪ್ಪು ಮಾಡಬಹುದು. ಅವರಿಗೆ ಹಠ ಇರಬಹುದು. ಹಾಗೆಂದು ಅವರ ಭವಿಷ್ಯ ಹಾಳಾಗಲು ಉತ್ತೇಜನ ಕೊಡಬಾರದು. ಕೂತುಕೊಂಡು ಮಕ್ಕಳ ಜೊತೆ ಮಾತನಾಡಿ ಅವರನ್ನು ಮನವೊಲಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ತಂದೆ-ತಾಯಿ ಇರಬಹುದು, ಸರ್ಕಾರ ಇರಬಹುದು ಅವರ ಶಿಕ್ಷಣದ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಕ್ಕಳು ತಪ್ಪು ಮಾಡಬಹುದು. ಅವರಿಗೆ ಹಠ ಇರಬಹುದು. ಹಾಗೆಂದು ಅವರ ಭವಿಷ್ಯ ಹಾಳಾಗಲು ಉತ್ತೇಜನ ಕೊಡಬಾರದು. ಕೂತುಕೊಂಡು ಮಕ್ಕಳ ಜೊತೆ ಮಾತನಾಡಿ ಅವರನ್ನು ಮನವೊಲಿಸಬೇಕು ಎಂದು ಸಲಹೆ ನೀಡಿದರು.

ಧರ್ಮಗುರುಗಳು, ತಂದೆ-ತಾಯಂದಿರು, ಶಿಕ್ಷಕರನ್ನು ಬಳಸಿಕೊಂಡು ಅವರಿಗೂ ಮನದಟ್ಟು ಮಾಡಿಕೊಟ್ಟು, ಮಕ್ಕಳಿಗೆ ತಿಳಿ ಹೇಳಿಸಬೇಕು. ಏಕೆಂದರೆ ಮಕ್ಕಳು ಶಿಕ್ಷಕರ ಮಾತನ್ನು ಗೌರವ ಕೊಟ್ಟು ಕೇಳುತ್ತಾಋಎ. ತಾಯಿ ಮೊದಲ ಗುರು. ಶಿಕ್ಷಕ ಎರಡನೇ ಗುರು. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕೋ ಅದನ್ನು ಮಾಡಿದರೆ ಒಳ್ಳೆಯದು ಎಂದರು.

ಶಾಲಾ ಮಕ್ಕಳಿಗೆ ದುಪ್ಪಟ್ಟ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಸಂವಿಧಾನ ಏನೆಲ್ಲಾ ಹೇಳುತ್ತದೋ, ಅಧಿಕಾರ, ಅವಕಾಶ ನೀಡಿದೆಯೋ ಅದರ ಪರವಾಗಿ ಕಾಂಗ್ರೆಸ್ ಇರುತ್ತದೆ. ನಮಗೆ ಅದೇ ಬೈಬಲ್, ಅದೇ ಖುರಾನ್, ಅದೇ ಭಗವದ್ಗೀತೆ ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ ಎಂದು ತಿಳಿಸಿದರು.

ಈಗ ಕೋರ್ಟ್ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ. ಕೆಲವರು ಅದನ್ನು ಒಪ್ಪುವುದಿಲ್ಲ. ಸುಪ್ರೀಂಕೋರ್ಟ್ ಗೂ ಹೋಗಬಹುದು. ಇವತ್ತಲ್ಲ ನಾಳೆ ಜಡ್ಜ್ ಮೆಂಟ್ ಬಂದು ಎಲ್ಲಾ ಸುಗಮವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular