Friday, October 18, 2024
Google search engine
Homeಮುಖಪುಟಐದು ದಿನಗಳಲ್ಲಿ 4 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಐದು ದಿನಗಳಲ್ಲಿ 4 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರ ಈಗ 98.61 ರೂ ಆಗಿದ್ದರೆ, ಡೀಸೆಲ್ ದರಗಳು 89.87ಕ್ಕೆ ಏರಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಐದು ದಿನಗಳಲ್ಲಿ 4 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು ಗ್ರಾಹಕರನ್ನು ಕಂಗಾಲಾಗುವಂತೆ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಂದು ಲೀಟರ್ ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ತೈಲ ಸಂಸ್ಥೆಗಳು ಕಚ್ಚಾ ವಸ್ತುಗಳ ಬೆಲೆಯನ್ನು ಗ್ರಾಹಕರಿಗೆ ವರ್ಗಾಯಿಸಿದ್ದರಿಂದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಹೆಚ್ಚಳವಾಗಿದೆ.

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರ ಈಗ 98.61 ರೂ ಆಗಿದ್ದರೆ, ಡೀಸೆಲ್ ದರಗಳು 89.87ಕ್ಕೆ ಏರಿದೆ.

ಮಾರ್ಚ್ 22ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ಅಂತ್ಯದ ನಂತರ ಎಲ್ಲಾ ನಾಲ್ಕು ಹೆಚ್ಚಳವು ಲೀಟರ್ ಗೆ 80 ಪೈಸೆ ಏರಿಕೆಯಾಗಿದ್ದು ನಾಲ್ಕು ಬಾರಿ ಹೆಚ್ಚಳದಲ್ಲಿ ಪೆಟ್ರೋಡೀಸೆಲ್ ಬೆಲೆ 3.20 ರೂಗಳಷ್ಟು ಹೆಚ್ಚಳ ಕಂಡಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೊಲಿಯಂ ಕಾರ್ಪೋರೇಷನ್ ಲಿಮಿಟೆಡ್, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಒಟ್ಟಾಗಿ ಪೆಟ್ರೋಲ್ ಸಂಗ್ರಹಿಸಲು ಯುಎಸ್.ಡಿ 2.25 ಶತಕೋಟಿ ಆದಾಯವನ್ನು ಕಳೆದುಕೊಂಡಿವೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸಸ್ ಗುರುವಾರ ತಿಳಿಸಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.

ಇಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.93 ರೂಪಾಯಿ, ಡೀಸೆಲ್ 88.14 ರೂಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದರಿಂದ ಇಂಧನ ದರ ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.

ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ ಸರಾಸರಿ 100 ಅಮೆರಿಕಾ ಡಾಲರ್ ಇದ್ದುದು ಈಗ 110 ಡಾಲರ್ ಗೆ ಏರಿಕೆಯಾಗಿದೆ. ಹೀಗಾಗಿ 15-20 ಹೆಚ್ಚಳಕ್ಕೆ ಪ್ರತಿ ಲೀಟರ್ ಚಿಲ್ಲರೆ ಬೆಲೆಯಲ್ಲಿ 9-12 ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಸಿಆರ್.ಐಎಸ್ಎಲ್ ಸಂಶೋಧನೆ ಹೇಳಿದೆ.

ಭಾರತ ತನ್ನ ತೈಲ ಅಗತ್ಯಗಳನ್ನು ಪೂರೈಸಲು ಆಮದುಗಳ ಮೇಲೆ ಶೇ.85ರಷ್ಟು ಅವಲಂಬಿತವಾಗಿದೆ ಮತ್ತು ಆದ್ದರಿಂದ ಚಿಲ್ಲರೆ ದರಗಳು ಜಾಗತಿಕ ಚಲನೆಗೆ ಅನುಗುಣವಾಗಿ ಹೊಂದಿಕೊಳ್ಳುತ್ತವೆ ಎಂದು ಎನ್.ಡಿ.ಟಿವಿ ತನ್ನ ವರದಿಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular