Thursday, November 21, 2024
Google search engine
Homeಮುಖಪುಟಮೇಕೆದಾಟು ಅಣೆಕಟ್ಟು ಕಟ್ಟುವ ಬಗ್ಗೆ ಪರಿಗಣಿಸಿ - ಡಿ.ಕೆ.ಶಿವಕುಮಾರ್

ಮೇಕೆದಾಟು ಅಣೆಕಟ್ಟು ಕಟ್ಟುವ ಬಗ್ಗೆ ಪರಿಗಣಿಸಿ – ಡಿ.ಕೆ.ಶಿವಕುಮಾರ್

ಸುಪ್ರೀಂಕೋರ್ಟ್ ಕೂಡ ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ರಾಷ್ಟ್ರಿಯ ಜಲ ಆಯೋಗ, ಕಾವೇರಿ ಪ್ರಾಧಿಕಾರ, ಕೇಂದ್ರ ಸರ್ಕಾರ ಸೇರಿದಂತೆ ಯಾರ ಅಭ್ಯಂತರವೂ ಇಲ್ಲ ಎಂದರು.

ತಮಿಳುನಾಡು ಪರ ವಕೀಲರೇ 2018ರಲ್ಲಿ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸುವ ಸಂದರ್ಭದಲ್ಲಿ ಮೆಟ್ಟೂರಿನ ಮೇಲ್ಭಾಗದಲ್ಲಿ ಕರ್ನಾಟಕವು ಮತ್ತೊಂದು ಅಣೆಕಟ್ಟು ಕಟ್ಟುವ ಬಗ್ಗೆ ಪರಿಗಣಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿದ್ದಾರೆ.

ವಿಧಾನ ಮಂಡಲದ ಉಭಯ ಸದನಗಳ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕರ್ನಾಟಕದ ಭೌಗೋಳಿಕ ಪರಿದಿಯಲ್ಲಿ ಬರುತ್ತದೆ. ಕರ್ನಾಟಕವು ಇದಕ್ಕಾಗಿ ನೆರೆ ರಾಜ್ಯಗಳ ಅನುಮತಿ ಪಡೆಯಬೇಕು ಎಂದು ಯಾವ ಕಾನೂನು ಹೇಳಿಲ್ಲ ಎಂದರು.

ಕಾವೇರಿ ನ್ಯಾಯಾಧಿಕರಣವು ಈಗಾಗಲೇ ನೀರು ಹಂಚಿಕೆ ಮಾಡಿ ಆಗಿದೆ. ಈಗ ಯಾರ ನೀರನ್ನೂ ಯಾರೂ ಕಬಳಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಕೂಡ ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ರಾಷ್ಟ್ರಿಯ ಜಲ ಆಯೋಗ, ಕಾವೇರಿ ಪ್ರಾಧಿಕಾರ, ಕೇಂದ್ರ ಸರ್ಕಾರ ಸೇರಿದಂತೆ ಯಾರ ಅಭ್ಯಂತರವೂ ಇಲ್ಲ ಎಂದರು.

ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಅನುಮತಿ ಪಡೆಯಿರಿ. ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇರುವ ಸುಲಭ ಮಾರ್ಗೋಪಾಯಗಳ ಬಗ್ಗೆ ರಾಜ್ಯದ ಪರ ವಕೀಲರು, ಕಾನೂನು ಸಲಹೆಗಾರರು ಸರ್ಕಾರಕ್ಕೆ ಸಲಹೆ ಮಾಡಬೇಕು ಎಂದು ವಿವರಿಸಿದರು.

ಇಲ್ಲದ ಅಡಚಣೆಗಳ ಬಗ್ಗೆ ಹೇಳಿ ಗೊಂದಲ ಸೃಷ್ಟಿಸಬಾರದು. ನೀವಿರುವುದು ಯೋಜನೆ ಅನುಷ್ಠಾನ ಸುಲಭ ಮಾಡುವ ಸಲಹೆ ನೀಡಲು, ಅದು ಬಿಟ್ಟು ಆಗಲ್ಲ. ನೋಡಬೇಕು ಅಂತ ಕತೆ ಹೇಳಬಾರದು. ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಏನು ಮಾಡಬೇಕೋ ಅದನ್ನು ಮಾಡಲಿ ಎಂದು ಸಲಹೆ ನೀಡಿದರು.

ವಾಸ್ತವವಾಗಿ ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಲಾಭ. ಏಕೆಂದರೆ ನಾವೇನು ಇದನ್ನು ನೀರಾವರಿಗೆ ಬಳಸಲ್ಲ. ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೆ ಮಾತ್ರ ಬಳಸಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular