ಜಿ-23 ನಾಯಕರ ನಿರ್ಣಾಯಕ ಸಭೆಯ ಒಂದು ದಿನದ ಬಳಿಕ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಭೂಪಿಂದರ್ ಸಿಂಗ್ ಹೂಡ ಅವರನ್ನು ಭೇಟಿ ಪಕ್ಷದ ಪುನರುಜ್ಜೀವನಗೊಳಿಸುವ ಮುಂದಿನ ಮಾರ್ಗದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜಿ-23 ಎಂಬುದು ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ನಾಯಕರ ಗುಂಪಾಗಿದ್ದು ಅವರು ಸಾಂಸ್ಥಿಕ ಪರೀಕ್ಷೆಗೆ ಒತ್ತಾಯಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸಭೆಯ ನಂತರ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರು ಜಿ-23ರ ಭಾಗವಾಗಿರುವ ಗುಲಾಂ ನಬಿ ಅಜಾದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಬುಧವಾರ ಸಭೆ ಸೇರಿ ಜಂಟಿ ಹೇಳಿಕೆಗೆ ಸಹಿ ಹಾಕಿದ ಗುಂಪುಗಳ ಬೇಡಿಕೆಯಂತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಮತ್ತು ಸಾಮೂಹಿಕ ನಾಯಕತ್ವ ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹೂಡ ಮತ್ತು ಅಜಾದ್ ಸಮಗ್ರ ಪ್ರಸ್ತಾಪಗಳನ್ನು ಕುರಿತು ಚರ್ಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕ ಜಿ-23 ಗುಂಪಿನ ನಾಯಕ ಅನಂದ್ ಶರ್ಮಾ ಕೂಡ ಅಜಾದ್ ಅವರ ನಿವಾಸದಲ್ಲಿ ಹೂಡಾ ಅವರನ್ನು ಸೇರಿಕೊಂಡರು ಎಂದು ಮೂಲಗಳನ್ನು ಉಲ್ಲೇಖಿಸಿ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.
ಕಾಂಗ್ರೆಸ್ ನ ಮುಂದಿರುವ ಏಕೈಕ ಮಾರ್ಗವೆಂದರೆ ಎಲ್ಲವನ್ನು ಒಳಗೊಳ್ಳುವ ಮತ್ತು ಸಾಮೂಹಿಕ ನಾಯಕತ್ವ ಮತ್ತು ಎಲ್ಲಾ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮಾಧರಿಯನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ಜಿ-23 ಗುಂಪು ಹೇಳಿದೆ.
ಜಿ-23 ಗುಂಪು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಬಯಸುತ್ತದೆ. ಯಾವುದೇ ರೀತಿಯಲ್ಲಿ ಅದನ್ನು ದುರ್ಬಲಗೊಳಿಸಬಾರದು ಎಂಬ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಈ ನಡುವೆ ಅಜಾದ್ ಅವರು ಸೋನಿಯಾ ಗಾಂದಿ ಅವರೊಂದಿಗೆ ತಮ್ಮ ನಿವಾಸದಲ್ಲಿ ಭೇಟಿಯ ಉದ್ದೇಶಗಳನ್ನು ತಿಳಿಸಲು ದೂರವಾಣಿ ಸಂಭಾಷಣೆ ನಡೆಸಿದ ಹಿನ್ನೆಲೆಯಲ್ಲಿ ಹೂಡಾ ಅವರೊಂದಿಗೆ ರಾಹುಲ್ ಗಾಂಧಿ ಅವರ ಭೇಟಿಯು ಮಹತ್ವದ್ದಾಗಿದೆ.
ಅಜಾದ್ ಅವರು ಶೀಘ್ರವೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪಕ್ಷ ಬಲಪಡಿಸುವ ಮತ್ತು ತಿದ್ದುಪಡಿಗಳನ್ನು ತರುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.