Thursday, November 21, 2024
Google search engine
Homeಇತರೆಕೋಲಾರ - ಜಗಳ ಬಿಡಿಸಲು ಹೋದ ಕ್ಯಾಶಿಯರ್ ನನ್ನು ಕೊಂದ ಗ್ರಾಹಕರು

ಕೋಲಾರ – ಜಗಳ ಬಿಡಿಸಲು ಹೋದ ಕ್ಯಾಶಿಯರ್ ನನ್ನು ಕೊಂದ ಗ್ರಾಹಕರು

ಈ ಸಂದರ್ಭದಲ್ಲಿ ಬಾರ್ ನಲ್ಲಿ ಕ್ಯಾಶ್ ಮೇಲೆ ಕುಳಿತಿದ್ದ ಮೋಹನ್ ಹೊರಗೆ ನಡಯುತ್ತಿ ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ ಗ್ರಾಹಕರು ಜಗಳ ಬಿಡಿಸಲು ಬಂದ ಮೋಹನ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯದ ಅಂಗಡಿಯ ಮುಂದೆ ತಡರಾತ್ರಿ ಕುಡುಕರ ನಡುವೆ ನಡೆದ ಜಗಳ ಬಿಡಿಸಲು ಹೋದ ಬಾರ್ ನ ಕ್ಯಾಶಿಯರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೋಲಾರ ನಗರದ ಟೇಕಲ್ ರಸ್ತೆಯಲ್ಲಿ ನಡೆದಿದೆ.

ಕೋಲಾರ ನಗರದ ಟೇಕಲ್ ರಸ್ತೆಯ ಚಾಲುಕ್ಯ ವೈನ್ ಶಾಪಿನಲ್ಲಿ ಮದ್ಯ ಪೂರೈಕೆ ಮಾಡುವ ವಿಷಯದಲ್ಲಿ ಗ್ರಾಹಕರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಬಾರ್ ಹೊರಗೆ ಹೋಗಿ ಜಗಳ ಮುಂದುವರಿಸಿದ್ದರು.

ಈ ಸಂದರ್ಭದಲ್ಲಿ ಬಾರ್ ನಲ್ಲಿ ಕ್ಯಾಶ್ ಮೇಲೆ ಕುಳಿತಿದ್ದ ಮೋಹನ್ ಹೊರಗೆ ನಡಯುತ್ತಿ ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ ಗ್ರಾಹಕರು ಜಗಳ ಬಿಡಿಸಲು ಬಂದ ಮೋಹನ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲುಕ್ಯ ವೈನ್ ನಲ್ಲಿ ಕಂಟಪೂರ್ತಿ ಕುಡಿದಿದ್ದ ನವೀದ್ ಬೇಗ್ ಮತ್ತು ಆರೀಫ್ ಖಾನ್ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಕಡಿಮೆ ಹಣ ನೀಡಿ ಕಿಂಗ್ ಫಿಷರ್ ಸ್ಟ್ರಾಂಗ್ ಬಿಯರ್ ಕೊಡಿ ಎಂದು ಕ್ಯಾಶಿಯರ್ ಮೋಹನ್ ಅವರನ್ನು ಒತ್ತಾಯಿಸಿದ್ದಾರೆ.

ನಾನು ನಿತ್ಯವೂ ಇಲ್ಲಿಗೆ ಕುಡಿಯಲು ಬರುತ್ತೇವೆ. ಸ್ವಲ್ಪ ಕಡಿಮೆ ಹಣ ತೆಗೆದುಕೊಳ್ಳಿ ಎಂದು ಗ್ರಾಹಕರು ಚೌಕಾಸಿ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈಯ್ದಿದಿದ್ದಾರೆ.

ಪಕ್ಕದಲ್ಲಿದ್ದ ಫೈರೋಜ್ ಎಂಬಾತ ಹಣ ಸರಿಯಾಗಿ ಕೊಡಿ ಕ್ಯಾಶಿಯರ್ ಮೇಲೆ ಯಾಕೆ ಜಗಳಕ್ಕೆ ಹೋಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿಗಳು ನೀನು ಕ್ಯಾಸಿಯರ್ ಗೆ ಯಾಕೆ ಸಪೋರ್ಟ್ ಮಾಡ್ತೀಯ ಎಂದು ಜಗಳವಾಡಿಕೊಂಡು ಮದ್ಯದ ಅಂಗಡಿಯಿಂದ ಹೊರಬಂದರು ಎಂದು ಹೇಳಲಾಗಿದೆ.

ಜೊತೆಗೆ ಹೊರಗೆ ಬಂದು ಬೀದಿಯಲ್ಲಿ ಜಗಳ ಮಾಡಿಕೊಳ್ಳುತ್ತಿದದರು. ಮದ್ಯದ ಅಂಗಡಿ ಪಕ್ಕದಲ್ಲಿದ್ದ ಲಕ್ಷ್ಮೀವೆಂಕಟೇಶ್ವರ ಬೇಕರಿಯಲ್ಲಿದ್ದ ಹರಿಕೃಷ್ಣ ಮತ್ತು ಸುಮಂತ್ ಜಗಳ ಬಿಡಿಸಲು ಹೋಗಿದ್ದಾರೆ. ಕ್ಯಾಶಿಯರ್ ಮೋಹನ್ ಕೂಡ ಹೊರಗೆ ಬಂದು ಜಗಳ ಬಿಡಿಸಲು ಹೋದಾಗ, ನಾವು ಪ್ರತಿದಿನ ಡ್ರಿಂಕ್ಸ್ ತೆಗೆದುಕೊಳ್ಳುತ್ತೇವೆ. ಆದರೆ ನೀನು ಈ ದಿನ ನಮಗೆ ಡ್ರಿಂಕ್ಸ್ ಕೊಡಲಿಲ್ಲ ಎಂದು ಚಾಕುವಿನಿಂದ ಇರಿದು ಹೋಗಿದ್ದಾರೆ.

ತೀವ್ರಗಾಯಗೊಂಡಿದ್ದ ಮೋಹನ್ ಕುಸಿದು ಬಿದ್ದಿದ್ದು ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಆಗಿ ಮೋಹನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮೋಹನ್ ಚಿಕ್ಕಮಗಳೂರು ಜಿಲ್ಲೆಯ ನೇರಳಕಟ್ಟೆ ನಿವಾಸಿಯಾಗಿದ್ದು ಹಲವು ವರ್ಷಗಳಿಂದ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಹಾಯಕ ಕ್ಯಾಶಿಯರ್ ಟಿ.ಎನ್. ವೆಂಕಟೇಶ್ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular