ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗಿದದ ಕಲ್ಲಿದ್ದಲನ್ನು ಬೇರೆ ರಾಜ್ಯಗಳ ಕೈಗಾರಿಕೆಗಳಿಗೆ ಮಾರಾಟ ಮಾಡಲಾಗಿದ್ದು ಗುಜರಾತ್ ನಲ್ಲಿ 6 ಸಾವಿರ ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. ಈ ಹಗರಣವನ್ನು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಎಂದು ಅದು ಆಗ್ರಹಿಸಿದೆ.
ನರೇಂದ್ರ ಮೋದಿ 2001 ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ ಡಿಸೆಂಬರ್ 2007 ರಿಂದ ಡಿಸೆಂಬರ್ 2012 ರ ನಡುವೆ ಕೈಗಾರಿಕೆ, ಗಣಿ ಮತ್ತು ಖನಿಜಗಳ ಖಾತೆ ಹೊಂದಿದ್ದರು. ವಿಜಯ್ ರೂಪಾನಿ, ಭೂಪೇಂದ್ರ ಪಟೇಲ್ ಕೈಗಾರಿಕೆ, ಗಣಿ ಮತ್ತು ಖನಿಜ ಇಲಾಖೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು ಎಂಬುದನ್ನು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಈ ಸಂಬಂಧ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಕೋಲ್ ಇಂಡಿಯಾ ಗಣಿಗಳಿಂದ ತೆಗೆದ ಕಲ್ಲಿದ್ದಲು ಹೊರತೆಗೆಯಲಾದ ಕೈಗಾರಿಕೆಗಳಿಗೆ ತಲುಪಲಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ 14 ವರ್ಷಗಳಲ್ಲಿ ಕೋಲ್ ಇಂಡಿಯಾ ಗಣಿಗಳಿಂದ ಗುಜರಾತ್ ವ್ಯಾಪಾರಿಗಳು ಮತ್ತು ಸಣ್ಣ ಕೈಗಾರಿಕೆಗಳ ಹೆಸರಿನಲ್ಲಿ 60 ಲಕ್ಷ ಟನ್ ಕಲ್ಲಿದ್ದಲನ್ನು ಕಳುಹಿಸಲಾಗಿದೆ. ಇದರ ಸರಾಸರಿ ಬೆಲೆ 1800 ಕೋಟಿ ರೂ ಆಗಿದೆ. ಪ್ರತಿ ಟನ್ ಗೆ 3000 ರೂ ಆದರೆ ಅದನ್ನು ಮಾರಾಟ ಮಾಢುವ ಬದಲು ವ್ಯಾಪಾರಿಗಳು ಮತ್ತು ಕೈಗಾರಿಕೆಗಳಿಗೆ ಇದನ್ನು ಇತರ ರಾಜ್ಯಗಳಲ್ಲಿ 8,000 ರಿಂದ 10,000 ರೂಗಳಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಸಣ್ಣ ಕೈಗಾರಿಕೆಗಳಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಕಲ್ಲಿದ್ದಲು ಒದಗಿಸಲು ಯುಪಿಎ ಸರ್ಕಾರ 2007ರಲ್ಲಿ ನೀತಿಯನ್ನು ರೂಪಿಸಿತ್ತು ಎಂದು ಕಾಂಗ್ರೆಸ್ ಹೇಳಿದೆ. ಈ ನೀತಿಯ ಅಡಿಯಲ್ಲಿ ಗುಜರಾತ್ ನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ ಕೋಲ್ ಇಂಡಿಯಾದ ಪಶ್ಚಿಮ ಕಲ್ಲಿದ್ದಲು ಕ್ಷೇತ್ರ ಮತ್ತು ಆಗ್ನೇಯ ಕಲ್ಲಿದ್ದಲು ಕ್ಷೇತ್ರದಿಂದ ಪ್ರತಿ ತಿಂಗಳು ಕಲ್ಲಿದ್ದಲನ್ನು ಹೊರ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಕಲ್ಲಿದ್ದಲಿನ ಫಲಾನುಭವಿ ಕೈಗಾರಿಕೆಗಳ ಪಟ್ಟಿ, ಅಗತ್ಯವಿರುವ ಕಲ್ಲಿದ್ದಲಿನ ಪ್ರಮಾಣ, ಯಾವ ಏಜೆನ್ಸಿಯಿಂದ ಕಲ್ಲಿದ್ದಲನ್ನು ಕೋಲ್ ಇಂಡಿಯಾಗೆ ಕಳುಹಿಸಲಾಗುವುದು ಸೇರಿ ಎಲ್ಲಾ ಮಾಹಿತಿಯನ್ನು ಗುಜರಾತ್ ಸರ್ಕಾರ ಕಳುಹಿಸಬೇಕಾಗಿತ್ತು ಎಂದು ವಲ್ಲಭ್ ಹೇಳಿದರು.
ರಾಜ್ಯ ನಾಮನಿರ್ದೇಶಿತ ಏಜೆನ್ಸಿ ಪಟ್ಟಿಯನ್ನು ಕಳುಹಿಸಲು ಎನ್ಎನ್ಎ ಎಂದರೆ ರಾಜ್ಯ ಸರ್ಕಾರವು ಘೋಷಿಸಿದ ಏಜೆನ್ಸಿ ಇದು ರಾಜ್ಯದ ಫಲಾನುಭವಿಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳು, ಸಣ್ಣ ವ್ಯಾಪಾರಿಗಳಿಗೆ ಕೋಲ್ ಇಂಡಿಯಾದಿಂದ ಕಲ್ಲಿದ್ದಲು ತೆಗೆದುಕೊಳ್ಳಲು ಅಧಿಕಾರ ಹೊಂದಿದೆ ಎಂದು ತಿಳಿಸಿದ್ದಾರೆ.


