Friday, October 18, 2024
Google search engine
Homeಮುಖಪುಟದ್ವೇಷ ಹರಡುವ ಕಾರಣಕ್ಕೆ ಕೇಸರಿ ಶಾಲು ಬಳಕೆ ಸಲ್ಲದು - ಸಿದ್ದರಾಮಯ್ಯ

ದ್ವೇಷ ಹರಡುವ ಕಾರಣಕ್ಕೆ ಕೇಸರಿ ಶಾಲು ಬಳಕೆ ಸಲ್ಲದು – ಸಿದ್ದರಾಮಯ್ಯ

ಅಂದೂ ಬಿಜೆಪಿ ದೇಶದ ಪರ ಇರಲಿಲ್ಲ. ಇಂದೂ ಇಲ್ಲ. ದೇಶಪ್ರೇಮದ ನಾಟಕವಾಡುವ ಬಿಜೆಪಿಯವರಿಗೆ ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ನಡುವೆ ಸಚಿವ ಸ್ಥಾನ ಇವೆರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆಯನ್ನು ಇಟ್ಟಿದ್ದೆವು ಎಂದರು.

ಸಿಂಧೂರ, ಹಿಜಾಬ್ ಎರಡೂ ನಮ್ಮ ಸಂಸ್ಕೃತಿ ಮತ್ತು ನಂಬಿಕೆ. ಕುಂಕುಮ ಇಡುವುದರಿಂದ ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಯಾರದೋ ಷಡ್ಯಂತ್ರಕ್ಕೆ ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳು ಬಲಿಯಾಗಬಾರದು. ಕೇಸರಿ ಶಾಲನ್ನು ಅಮಾನವೀಯ, ದ್ವೇಷ ಹರಡುವ ಕಾರಣಗಳಿಗೆ ಬಳಸಬಾರದು ಎಂದು ಸಲಹೆ ಮಾಡಿದ್ದಾರೆ.

ಕೇಸರಿ ತ್ಯಾಗದ ಸಂಕೇತ. ಅದನ್ನು ದ್ವೇಷ ಸಾಧನೆಗೆ ಬಳಸುವುದೇ ಧರ್ಮದ್ರೋಹ. ಎಳೆಯ ಮಕ್ಕಳಲ್ಲಿ ದ್ವೇಷ ತುಂಬುವವರು ಜೀವ ವಿರೋಧಿಗಳು ಎಂದು ಟೀಕಿಸಿದ್ದಾರೆ.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಹಿಡಿದು ಬ್ರಿಟಿಷರ ವಿರುದ್ದ ಹೋರಾಡಿದ್ದರೆ ಅವರಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳ ಬಗ್ಗೆ ನಿಜವಾದ ಗೌರವ, ಭಕ್ತಿ ಇರುತ್ತಿತ್ತು ಎಂದು ಹೇಳಿದ್ದಾರೆ.

ಅಂದೂ ಬಿಜೆಪಿ ದೇಶದ ಪರ ಇರಲಿಲ್ಲ. ಇಂದೂ ಇಲ್ಲ. ದೇಶಪ್ರೇಮದ ನಾಟಕವಾಡುವ ಬಿಜೆಪಿಯವರಿಗೆ ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ನಡುವೆ ಸಚಿವ ಸ್ಥಾನ ಇವೆರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆಯನ್ನು ಇಟ್ಟಿದ್ದೆವು ಎಂದರು.

ಬಿಜೆಪಿಗೆ ರಾಷ್ಟ್ರಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ. ಈ ಘಠನೆಯಿಂದ ಬಿಜೆಪಿಯ ದೇಶಪ್ರೇಮದ ಹಿಂದಿರುವ ಸ್ವಾರ್ಥದ ಮುಖವಾಡ ಬಯಲಾಗಿದೆ ಎಂದು ಆರೋಪಿಸಿದರು.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಬಿಜೆಪಿಯವರಿಗೆ ಸಣ್ಣ ವಿಷಯ ಇರಬಹುದು. ಆದರೆ ನಮಗೆ ಇದು ಬಹಳ ಗಂಭೀರವಾಧ ಸಂಗತಿ. ರಾಷ್ಟ್ರಧ್ವಜ ಹಿಡಿದು ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಹಾಗಾಗಿ ಹುತಾತ್ಮರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನಸಲ್ಲಿ ದೇಶಪ್ರೇಮ, ದೇಶದ ಬಗ್ಗೆ ಗೌರವಿದ್ದರೆ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಿ, ಅಧಿಕಾರಕ್ಕಿಂತ ದೇಶ ಮೊದಲು ಎಂದು ಸಾಬೀತು ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular