Friday, October 18, 2024
Google search engine
Homeಮುಖಪುಟಲಖಿಂಪುರಖೇರಿ ಹತ್ಯಾಕಾಂಡ - ಪ್ರಮುಖ ಆರೋಪಿ ಅಶಿಶ್ ಮಿಶ್ರಾಗೆ ಜಾಮೀನು

ಲಖಿಂಪುರಖೇರಿ ಹತ್ಯಾಕಾಂಡ – ಪ್ರಮುಖ ಆರೋಪಿ ಅಶಿಶ್ ಮಿಶ್ರಾಗೆ ಜಾಮೀನು

ನ್ಯಾಯಮೂರ್ತಿ ರಾಜೀವ್ ಸಿಂಗ್ ಗುರುವಾರ ಅದೇಶ ಹೊರಡಿಸಿದ್ದಾರೆ ಮತ್ತು ಆಶಿಶ್ ಮಿಶ್ರಾಗೆ ಜಾಮೀನು ನೀಡಿದ್ದಾರೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿನೋದ್ ಕುಮಾರ್ ಶಾಹಿ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಲಖಿಂಪುರಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಜಾಮೀನು ಪಡೆದ ಎರಡನೇ ಆರೋಪಿಯಾಗಿದ್ದಾನೆ.

ಅಲಹಾಬಾದ್ ಹೈಕೋರ್ಟ್ ಅಶಿಶ್ ಮಿಶ್ರಾ ಅರ್ಜಿಯನ್ನು ಆಲಿಸಿದ ನಂತರ ಲಕ್ನೋ ಪೀಠವು ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು.

ನ್ಯಾಯಮೂರ್ತಿ ರಾಜೀವ್ ಸಿಂಗ್ ಗುರುವಾರ ಅದೇಶ ಹೊರಡಿಸಿದ್ದಾರೆ ಮತ್ತು ಆಶಿಶ್ ಮಿಶ್ರಾಗೆ ಜಾಮೀನು ನೀಡಿದ್ದಾರೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿನೋದ್ ಕುಮಾರ್ ಶಾಹಿ ಸ್ಪಷ್ಟಪಡಿಸಿದ್ದಾರೆ.

ಡಿಪೆನ್ಸ್ ವಕೀಲ ಸಲೀಲ್ ಕುಮಾರ್ ಶ್ರೀವಾಸ್ತವ, ಜಾಮೀನು ಅರ್ಜಿಯ ವಾದದ ಸಮಯದಲ್ಲಿ ಅಶಿಶ್ ಮಿಶ್ರಾ ಸ್ಥಳದಲ್ಲಿ ಇಲ್ಲದ ಕಾರಣ ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂಬುದೂ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ ಎಂದರು.

ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್.ಐ.ಟಿ ಜನವರಿ 3ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಶಿಸ್ ಮಿಶ್ರಾ ಸೇರಿ 14 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಸಾಕ್ಷ್ಯ ನಾಶದ ಆರೋಪದ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular