Friday, October 18, 2024
Google search engine
Homeಮುಖಪುಟಹಿಜಾಬ್ ಪ್ರಕರಣ - ಹೈಕೋರ್ಟ್ ತೀರ್ಪು ಬರಲಿ ನಂತರ ನೋಡೋಣ - ಸುಪ್ರೀಂ

ಹಿಜಾಬ್ ಪ್ರಕರಣ – ಹೈಕೋರ್ಟ್ ತೀರ್ಪು ಬರಲಿ ನಂತರ ನೋಡೋಣ – ಸುಪ್ರೀಂ

ಹಿಜಾಬ್ ವಿವಾದದ ಸಂಬಂಧ ಹೈಕೋರ್ಟ್ ಪರಿಶೀಲಿಸುತ್ತಿರುವ ಹಂತದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬೇಕು. ಇದು ಚನ್ನಾಗಿ ಕಾಣುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಿಜಾಬ್ ಸಂಬಂಧ ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಗಳನ್ನು ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ಪಟ್ಟಿಗೆ ಸೇರಿಸಿ ದಿನಾಂಕ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಕರ್ನಾಟಕ ಹೈಕೋರ್ಟ್ ಈಗಾಗಲೇ ಸಮಸ್ಯೆಯನ್ನು ಪರಿಶೀಲಿಸುತ್ತಿದೆ. ಅದನ್ನು ನಿರ್ಧರಿಸಲು ಅವಕಾಶ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವಕೀಲ ಕಪಿಲ್ ಸಿಬಲ್ ಗೆ ತಿಳಿಸಿದರು.

ಹಿಜಾಬ್ ವಿವಾದದ ಸಂಬಂಧ ಹೈಕೋರ್ಟ್ ಪರಿಶೀಲಿಸುತ್ತಿರುವ ಹಂತದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬೇಕು. ಇದು ಚನ್ನಾಗಿ ಕಾಣುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪರೀಕ್ಷೆಗಳಿಗೆ ಕೇವಲ ಎರಡು ತಿಂಗಳು ಬಾಕಿ ಇದ್ದು ತಮ್ಮ ಕಕ್ಷಿದಾರರು ಇಂದು ಅರ್ಜಿ ಸಲ್ಲಿಸಿದ್ದಾರೆ ಎಂದು ಸಿಬಲ್ ಹೇಳಿದರು. ಆಗ ಮೊದಲು ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿ ಎಂದು ಮುಖ್ಯಮಂತ್ರಿ ರಮಣ ತಿಳಿಸಿದರು.

ಉನ್ನತ ನ್ಯಾಯಾಲಯವು ವರ್ಗಾವಣೆ ಅರ್ಜಿಯನ್ನು ಪಟ್ಟಿ ಮಾಡಬಹುದು ಮತ್ತು ಅದನ್ನು ಬಾಕಿ ಇರಿಸಬಹು ಎಂದು ಸಿಬಲ್ ನ್ಯಾಯಾಲಯದ ಗಮನಕ್ಕೆ ತಂದರು. ಆಗ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್ ಈ ಸಮಸ್ಯೆಯು ಸುಪ್ರೀಂಕೋರ್ಟಿನಲ್ಲಿ ಬಾಕಿ ಇದೆ ಎಂದು ಉಚ್ಛ ನ್ಯಾಯಾಲಯವು ಎಂದಿಗೂ ಕೇಳುವುದಿಲ್ಲ ಎಂದು ಪೀಠ ಹೇಳಿದೆ.

ಶಾಲಾ ಕಾಲೇಜುಗಳನ್ನು ಮುಚ್ಚಿರುವುದರಿಂದ ಈ ವಿಷಯವನ್ನು ಪರಿಗಣಿಸಬೇಕು ಎಂದು ಸಿಬಲ್ ಆಗ್ರಹಿಸಿದರು. ಆಗ ನ್ಯಾಯಾಲಯ ಹೈಕೋರ್ಟ್ ಮೊದಲ ಹೇಳಲಿ ಎಂದು ಪುನರುಚ್ಛರಿಸಿತು.

ಸಿಬಲ್ ಅವರ ಅರ್ಜಿಯನ್ನು ಪಟ್ಟಿ ಮಾಡಲು ಉನ್ನತ ನ್ಯಾಯಾಲಯವನ್ನು ಕೇಳುತ್ತೇನೆ ಮತ್ತು ಹೈಕೋರ್ಟ್ ಆದೇಶವನ್ನು ನೀಡದಿದ್ದರೆ, ಈ ನ್ಯಾಯಾಲಯವು ಅದನ್ನು ಸ್ವತಃ ವರ್ಗಾಯಿಸಿ ವಿಚಾರಣೆ ನಡೆಸಬಹುದು ಎಂದು ಸಿಬಲ್ ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ನಾಔಉ ನೋಡೋಣ, ಉಡುಪಿ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಬುಶ್ರಾ ಸಲ್ಲಿಸಿರುವ ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ. ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದರು.

ಆರ್ಟಿಕಲ್ 14, 19(1)(ಎ), 21, 25, ಮತ್ತು 29ರ ಅಡಿಯಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಸರ್ಕಾರ ಹೊರಡಿಸಿರುವ ಆದೇಶವು ಕರ್ನಾಟಕ ಶಿಕ್ಷಣ ಕಾಯ್ದೆ 1963ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular