ಭಾರತ ಇಂದು 200 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡಿದ್ದು ಉದ್ಯೋಗಾವಕಾಶ ಸೃಷ್ಟಿಸುವ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
ಟ್ವೀಟ್ ಮಾಡಿರುವ ಅವರು, ಬಜೆಟ್ ನಲ್ಲಿ ನಗರ ಉದ್ಯೋಗ ಖಾತ್ರಿ ಘೋಷಣೆ ಮಾಡಿಲ್ಲ. ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯಡಿ ಕಳೆದ ವರ್ಷ 73 ಸಾವಿರ ಕೋಟಿ ರೂಪಾಯಿ ಉಳಿದಿದೆ. ಇದು ಸುಮಾರು 50 ಸಾವಿರ ಕೋಟಿ ರೂಪಾಯಿ ಕಡಿಮೆಯಾಗಿದೆ ಎಂದು ಟೀಕಸಿದ್ದಾರೆ.
ನಮ್ಮ ಯುವಕರ ಜೀವನೋಪಾಯದ ಮೇಲೆ ಕ್ರಿಮಿನಲ್ ದಾಳಿ ನಡೆದಿದೆ. ಪ್ರಚಾರ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸ ಮಾಢಿಲ್ಲ ಎಂದು ಆರೋಪಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಮ್ಮೆಯಿಂದ 2,37 ಲಕ್ಷ ಕೋಟಿ ಅನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಗೋಧಿ ಮತ್ತು ಭತ್ತದ ಮೇಲೆ ಕನಿಷ್ಠ ಬೆಂಬಲ ಬೆಲೆ ಎಂದು ಘೋಷಿಸುತ್ತದೆ. ಇದು 2020-21ರಲ್ಲಿನ ಎಂಎಸ್.ಪಿ ಪಾವತಿಗಳಿಗಿಂತ ಕಡಿಮೆಯಾಗಿದೆ ಎಂದು ದೂರಿದ್ದಾರೆ.
ಶೂನ್ಯ ಬಜೆಟ್ – ರಾಹುಲ್ ಟೀಕೆ:
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಶೂನ್ಯ ಮೊತ್ತದ ಬಜೆಟ್ ಇದಾಗಿದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಯಾವುದಕ್ಕೂ ಒತ್ತು ನೀಡಿಲ್ಲ. ಸಂಬಳದ ವರ್ಗ – ಮಧ್ಯಮ ವರ್ಗ – ಬಡವರು ಮತ್ತು ವಂಚಿತರು – ಯುವ ಜನ – ರೈತರು – ಮೈಕ್ರೊ, ಸಣ್ಣ, ಮಧ್ಯಮ ಎಂಟರ್ ಪ್ರೈಸಸ್ ಗಳಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಸಾಮಾನ್ಯ ಜನರಿಗೆ ಬಜೆಟ್ ಶೂನ್ಯವನ್ನು ಹೊಂದಿದೆ. ಸರ್ಕಾರವು ಯಾವುದನ್ನು ಸೂಚಿಸುವ ದೊಡ್ಡ ಪದಗಳಲ್ಲಿ ಕಳೆದುಹೋಗಿದೆ. ಪೆಗಾಸಸ್ ಸ್ಪಿನ್ ಬಜೆಟ್ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.