ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಸಂಸತ್ ಅಧಿವೇಶನದಲ್ಲಿ ಬಜೆಟ್ ಮಂಡಿಸಿದ್ದು ಆದಾಯ ತೆರಿಗೆಯಲ್ಲಿ ಯಾವುದೇ ಮಾರ್ಪಾಟು ಮಾಡಿಲ್ಲ ಎಂಬುದನ್ನು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, 2.5 ಲಕ್ಷ ರೂಪಾಯಿ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ. 2.5 ರಿಂದ 5 ಲಕ್ಷ ರೂವರೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ. 5 ಲಕ್ಷದಿಂದ 7.5 ಲಕ್ಷ ರೂಪಾಯಿಗೆ ಶೇ.10 ತೆರಿಗೆ ಹಾಕಲಾಗಿದೆ. 7.5 ಲಕ್ಷ ರೂನಿಂದ 10 ಲಕ್ಷ ರೂಪಾಯಿಗೆ ಶೇ.15ರಷ್ಟು ತೆರಿಗೆ ವಿಧಿಸಲಾಗಿದೆ ಎಂದರು.
ಕೃಷಿ ಉಪಕರಣಗಳು ಮತ್ತು ವಿದೇಶಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ. ಚಿನ್ನ ಮತ್ತು ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕವವನ್ನು 12 ರಿಂದ 7ಕ್ಕೆ ಇಳಿಕೆ ಮಾಡಲಾಗಿದೆ.
ಬಟ್ಟೆ, ಮೊಬೈಲ್, ಮೊಬೈಲ್ ಚಾರ್ಜರ್, ಎಲೆಕ್ಟ್ರಾನಿಕ್ ಉಪಕರಣಗಳು, ಚಪ್ಪಲಿ, ಚರ್ಮದ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ ಎಂದು ಬಜೆಟ್ ಮಂಡನೆಯ ಸಂದರ್ಭದಲ್ಲಿ ತಿಳಿಸಿದರು.
ಕಾರ್ಪೋರೇಟ್ ಮೇಲಿನ ಸರ್ಚಾರ್ಜ್ ಇಳಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹತ್ತನೇ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ಮೂರನೇ ಅಲೆಯಿಂದಾಗಿ ಏರುತ್ತಿರುವ ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ.