ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಅಧ್ಯಕ್ಷೀಯ ಭಾಷಣದ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರಪತಿಗಳು ಚೀನಾ ಮತ್ತು ಪಾಕಿಸ್ತಾನವನ್ನು ಉಲ್ಲೇಖಿಸಿಲ್ಲ. ಹಾಗೆಯೇ ನಾಗಾಲ್ಯಾಂಡ್ ನಲ್ಲಿನ ಹತ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೊವಿಡ್ ಸಾವುಗಳ ಬಗ್ಗೆ ಸರ್ಕಾರ ಕ್ಷಮೆಯಾಚಿಸಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವ ಬಗ್ಗೆ ಯಾಕೆ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ‘ಚೀನಾ, ಪಾಕ್ ಪರಿಸ್ಥಿತಿಯ ಬಗ್ಗೆ ಒಂದು ಮಾತನಾಡಿಲ್ಲ. ನಾಗಾಲ್ಯಾಂಡ್ ನಲ್ಲಿ ನಾಗರಿಕರ ಹತ್ಯಾಕಾಂಡದ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಮರುಸ್ಥಾಪಿಸುವ ಬಗ್ಗೆ ಯಾವುದೇ ಘೋಷಣೆ ಇಲ್ಲ ಎಂದು ಟೀಕಿಸಿದ್ದಾರೆ.
ಅಫ್ಘಾನಿಸ್ತಾವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿದೆ. ಭಾರತದ ಮೇಲೆ ಅದರ ಭಯೋತ್ಪಾದನೆಯ ಪರಿಣಾಮಗಳು ಬೀರಿವೆ. ಎರಡನೇ ಕೊವಿಡ್ ಸಾವುಗಳಿಗೆ ಕ್ಷಮೆಯಾಚಿಸಬೇಕಾಗಿತ್ತು ಎಂದು ಹೇಳಿದರು.
ವಿಶ್ವದಲ್ಲಿ ಸರ್ಕಾರದ ರಾಜತಾಂತ್ರಿಕ ಪ್ರಭಾವವನ್ನು ರಾಷ್ಟ್ರಪತಿಗಳು ಪ್ರಸ್ತಾಪಿಸಿದ್ದರೂ ರಾಜತಾಂತ್ರಿಕ ಸಂಬಂಧಗಳಲ್ಲಿ ಸುಧಾರಣೆಯ ಮೂಲಕ ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಪರಿಸರದಲ್ಲಿ ಭಾರತ ತನ್ನ ಸ್ಥಾನವನ್ನು ಬಲಪಡಿಸಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಿಳಿಸಿದರು.
ರಾಜತಾಂತ್ರಿಕ ಸಂಬಂಧಗಳಲ್ಲಿ ಸುಧಾರಣೆಯ ಮೂಲಕ ಭಾರತ ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಪರಿಸರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಭದ್ರತಾ ಮಂಡಳಿಯು ಸಾಗರ ಭದ್ರತೆಯ ವಿಷಯದ ಬಗ್ಗೆ ಸಮಗ್ರ ಚರ್ಚೆ ನಡೆಸಿದೆ. ಅಧ್ಯಕ್ಷರ ಹೇಳಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.