ತುಮಕೂರು ನಗರಕ್ಕೆ ಹೇಮಾವತಿ ನದಿ ನೀರು ಬಾರದೆ ಇದ್ದರೆ ಪಾವಗಡಕ್ಕಿಂತ ಕಡೆಯಾಗಿರುತ್ತಿತ್ತು ತುಮಕೂರು ಎಂದು ಶಾಸಕ ಜ್ಯೋತಿಗಣೇಶ್ ಹೇಳಿದ್ದಾರೆ.
ತುಮಕೂರಿನ 26ನೇ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿದ ಅವರು, ಪಾವಗಡ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ತುಮಕೂರಿಗೆ ಹೇಮಾವತಿ ನದಿ ನೀರು ಬರದಿದ್ದರೆ ಪಾವಗಡಕ್ಕಿಂತಲೂ ಕಡೆಯಾಗಿರುತ್ತಿತ್ತು ಎಂದು ತಿಳಿಸಿದ್ದಾರೆ.
ನಗರದ ಹೊರವಲಯದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿಲ್ಲ. ಯಾಕೆಂದರೆ ಭೂಸ್ವಾಧೀನಪಡಿಸಿಕೊಳ್ಳುವುದು, ಪರಿಹಾರ ನೀಡುವ ಕುರಿತಂತೆ ಸಮಸ್ಯೆಗಳು ಇವೆ. ಹೀಗಾಗಿ ನಗರದಲ್ಲಿ ಶೇಕಡ 50ರಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ತುಮಕೂರು ಹೊರವಲಯದಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಸಾಕಷ್ಟು ಸಮಸ್ಯೆ ಇದೆ. ಆಯುಕ್ತರಿಗೆ ಇದೇ ತಲೆನೋವಾಗಿ ಪರಿಣಿಸಿದೆ. 2013ರಲ್ಲಿ ಅನುಮತಿ ದೊರಕಿತ್ತು. ಅದು ಈ ಅನುಷ್ಠಾನಗೊಳ್ಳುತ್ತಿದೆ ಎಂದರು.
ಹೇಮಾವತಿ ನೀರಿನ ಜೊತೆಗೆ ತುಮಕೂರಿನ ಅಮಾನಿಕೆರೆಯನ್ನು ಕುಡಿಯುವ ನೀರು ಪೂರೈಸಲು ಬಳಸಿಕೊಳ್ಳಲಾಗಿದೆ. ಹೇಮಾವತಿ ನೀರು ಹರಿಸಿ ಅಮಾನಿಕೆರೆ ತುಂಬಿಸಲಾಗಿದೆ ಎಂದರು.
ಹೆಬ್ಬಾಕ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಹೆಬ್ಬಾಕ ಕೆರೆಯಲ್ಲಿ ನೀರು ನಿಲ್ಲುವುದಿಲ್ಲ. ಹಾಗಾಗಿ ಮರಳೂರು ಕೆರೆ ಮತ್ತು ಗಂಗಸಂದ್ರ ಕೆರೆಗಳಿಗೆ ನೀರು ಹರಿಸಿ ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ನೀರಿನ ಕೊರತೆ ಇದ್ದಿದ್ದರೆ ಕಂಪನಿಗಳಾವುವು ಇಲ್ಲಿಗೆ ಬರುತ್ತಿರಲಿಲ್ಲ. ಈ ಪರಿಸ್ಥಿತಿ ಇದ್ದರೆ ಪಾವಗಡಕ್ಕಿಂತಲೂ ತುಮಕೂರು ಕಡೆಯಾಗಿರುತ್ತಿತ್ತು. ಯುಜಿಡಿ ಸಮಸ್ಯೆ ಇದೆ ಎಂದು ಶಾಸಕ ಜ್ಯೋತಿ ಗಣೇಶ್ ಒಪ್ಪಿಕೊಂಡಿದ್ದಾರೆ.