ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಷರತ್ತುಗಳಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹಿಂದಿನ ತೀರ್ಪುಗಳಲ್ಲಿ ಮಾನದಂಡಗಳನ್ನು ಈಗಾಗಲೇ ನಿರ್ದಿಷ್ಟಪಡಿಸಿರುವುದರಿಂದ ಹೊಸ ಮಾನದಂಡ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಸೇವೆಯಲ್ಲಿರುವ ಕೆಲವು ಕೇಡರ್ ಗಳ ಸಮ್ಮಿಲನವಾಗಿರುವ ಗುಂಪಿಗೆ ಸಂಬಂಧಿಸಿದ ಡೇಟಾವನ್ನು ಗಣನೆಗೆ ತೆಗೆದುಕೊಂಡರೆ ಬಡ್ತಿಗಳಲ್ಲಿ ಯಾವ ಮೀಸಲಾತಿಗೆ ಸಂಬಂಧಿಸಿದಂತೆ ಕೇಡರ್ ನಲ್ಲಿ ಎಸ್.ಸಿ ಮತ್ತು ಎಸ್.ಟಿ ಪ್ರಾತಿನಿಧ್ಯದ ಅಸಮರ್ಪಕತೆ ಸರಿಯಾದ ಚಿತ್ರಣವನ್ನು ನೀಡುವುದಿಲ್ಲ ಎಂದು ಮೂವರು ನ್ಯಾಯಮೂರ್ತಿಗಳ ಪೀಠ ತಿಳಿಸಿದೆ.
ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಜಾರಿಗೊಳಿಸುವ ಮೊದಲು ಉದ್ಯೋಗಗಳಲ್ಲಿ ಅವರ ಸಮರ್ಪಕತೆ ಅಥವಾ ಅಸಮರ್ಪಕತೆಯನ್ನು ಪ್ರತಿಬಿಂಬಿಸುವ ಡೇಟಾವನ್ನು ಸಂಗ್ರಹಿಸುವಂತೆ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಕೇಳಿದೆ.
ಎಸ್.ಸಿ ಮತ್ತು ಎಸ್.ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿಗೆ ನ್ಯಾಯಾಲಯವು ವಿಶಾಲ ನಿಯತಾಂಕಗಳನ್ನು ನೀಡಿದೆ. ಆ ನಿಯತಾಂಕಗಳ ಮೇಲೆ ಬಡ್ತಿಯಲ್ಲಿ ಮೀಸಲಾತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀತಿ ಸಿಂಧುತ್ವವನ್ನು ನಿರ್ಧರಿಸುತ್ತದೆ ಎಂದು ಹೇಳಿದೆ.


