2017ರಲ್ಲೇ ಪೆಗಾಸಸ್ ಸ್ಪೈವೇರ್ ಖರೀದಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸ್ಪೈವೇರ್ ಬಳಸಿಕೊಂಡು ಅಕ್ರಮವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹ ಎಂದು ಆರೋಪಿಸಿದೆ.
ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆ 2017ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು 2 ಬಿಲಿಯನ್ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಕೇಂದ್ರ ಭಾಗಗಳನ್ನು ಖರೀದಿ ಮಾಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸಿ ನ್ಯಾಷನಲ್ ಹೆರಾಲ್ಡ್ ಸುದ್ದಿ ಮಾಡಿದೆ.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ಭಾರತದ ಶತ್ರುಗಳಂತೆ ವರ್ತಿಸುತ್ತಿದೆ. ಇಲ್ಲಿನ ನಾಗರಿಕರ ವಿರುದ್ಧ ಯುದ್ದಾಸ್ತ್ರವ್ನು ಏಕೆ ಬಳಿಸಿತು ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಪೆಗಾಸಸ್ ಬಳಸಿಕೊಂಡು ಕಾನೂನುಬಾಹಿರವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹಕ್ಕೆ ಸಮಾನವಾಗಿದೆ. ಯಾರೂ ಕಾನೂನಿಗಿಂತ ಮೇಲಲ್ಲ. ನ್ಯಾಯವನ್ನು ಒದಗಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಮಾಧ್ಯಮಗಳ ವರದಿ ಉಲ್ಲೇಖಿಸಿರುವ ಕಾಂಗ್ರೆಸ್ ವಕ್ತಾರ ಶಾಮ ಮೊಹಮ್ಮದ್, ಬಿಜೆಪಿ ಸರ್ಕಾರ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ನಾಗರಿಕರ ಮೇಲೆ ಕಣ್ಣಿಡಲು ಮಿಲಿಟರಿ ದರ್ಜೆಯ ಸ್ಪೈವೇರ್ ಅನ್ನು ಬಳಸಿದೆ ಎಂಬುದಕ್ಕೆ ಇದು ನಿರಾಕರಿಸಲಾಗದ ಪುರಾವೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದ ಶಕ್ತಿಸಿನ್ಹ್ ಗೋಹಿಲ್, ನರೇಂದ್ರಮೋದಿ ಏಕೆ ಮೌನವಾಗಿದ್ದಾರೆ? ಸ್ಪಷ್ಟಪಡಿಸುವುದು ಪ್ರಧಾನಿ ಕಚೇರಿಯ ಕರ್ತವ್ಯವಾಗಿದೆ. ಇದು ತೆರಿಗೆ ಪಾವತಿದಾರರ ಹಣದಿಂದ ಪಾವತಿಸುವ ಮೂಲಕ ಚಂದಾದಾರಿಕೆಯಾಗಿದೆ? 300 ಕೋಟಿ ಸ್ಪೈವೇರ್ ಪೆಗಾಸಸ್ ಇಸ್ರೇಲಿ NSO ಕಂಪನಿಯಿಂದ ಮಾರಾಟವಾಗಿದೆ,” ಎಂದು ಟ್ವೀಟ್ ಮಾಡಿದ್ದಾರೆ.
“ಇದು ನಮ್ಮ ಸರ್ಕಾರವು ಸುಪ್ರೀಂ ಕೋರ್ಟ್ ಮತ್ತು ಸಂಸತ್ತನ್ನು ದಾರಿತಪ್ಪಿಸಿದೆ ಎಂದು ಸೂಚಿಸುತ್ತದೆ” ಎಂದು ಗೋಹಿಲ್ ಹೇಳಿಕೆ ಉಲ್ಲೇಖಿಸಿ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.


